ಕರ್ನಾಟಕ

karnataka

ETV Bharat / state

ಮಂಗಳೂರು ವಿವಿ ಕಾಲೇಜಿನಲ್ಲಿ ಭುಗಿಲೆದ್ದ ಮತ್ತೊಂದು ವಿವಾದ: ಈ ಮುಖಂಡನ ಆತಿಥ್ಯಕ್ಕೆ ಅಪಸ್ವರ - ಮಂಗಳೂರು ವಿವಿ ಕಾಲೇಜ್​

ಮಂಗಳೂರು ವಿವಿ ಕಾಲೇಜಿನಲ್ಲಿ ಶನಿವಾರ ನಡೆಯಲಿರುವ ಪ್ರತಿಭಾ ದಿನಾಚರಣೆ ಹಾಗೂ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಹಿಂದೂ ಮುಖಂಡ ಶ್ರೀಕಾಂತ್ ಶೆಟ್ಟಿ ಎಂಬುವರನ್ನು ಅತಿಥಿಯಾಗಿ ಕರೆದಿರುವುದಕ್ಕೆ ಎನ್ ಎಸ್ ಯು ಐ ವಿರೋಧ ವ್ಯಕ್ತಪಡಿಸಿದೆ.

mangaluru university college
ಪ್ರತಿಭಾ ದಿನಾಚರಣೆಗೆ ಆಗಮಿಸುವಂತೆ ಶ್ರೀಕಾಂತ್ ಶೆಟ್ಟಿಗೆ ಆಹ್ವಾನ

By

Published : Jun 23, 2023, 8:25 AM IST

ಮಂಗಳೂರು : ಹಿಜಾಬ್ ವಿವಾದ ಭುಗಿಲೆದ್ದ ಮಂಗಳೂರು ವಿವಿ ಕಾಲೇಜಿನಲ್ಲಿ ಮತ್ತೊಂದು ವಿವಾದವೆದ್ದಿದೆ. ಕಾಲೇಜು ಕಾರ್ಯಕ್ರಮವೊಂದಕ್ಕೆ ಹಿಂದೂ ಮುಖಂಡ ಶ್ರೀಕಾಂತ್ ಶೆಟ್ಟಿ ಎಂಬುವರನ್ನು ಅತಿಥಿಯಾಗಿ ಕರೆದಿರುವ ಹಿನ್ನೆಲೆಯಲ್ಲಿ ಅಪಸ್ವರ ಕೇಳಿ ಬಂದಿದ್ದು, ಈ ಬೆನ್ನಲ್ಲೇ ಎಚ್ಚೆತ್ತುಕೊಂಡ ಕಾಲೇಜು ಆಡಳಿತ ಮಂಡಳಿ ಕಾರ್ಯಕ್ರಮವನ್ನು ಮುಂದೂಡಿದೆ.

ಶನಿವಾರ ಮಂಗಳೂರು ವಿವಿ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ ಹಾಗೂ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಹಾಗೂ ಭಾಷಣಕಾರರಾಗಿ ಹಿಂದೂ ಜಾಗರಣ ವೇದಿಕೆಯ ಮುಖಂಡ, ವಾಗ್ಮಿ ಶ್ರೀಕಾಂತ್ ಶೆಟ್ಟಿಯವರಿಗೆ ಆಹ್ವಾನ ನೀಡಲಾಗಿತ್ತು. ಎಬಿವಿಪಿ‌ ನೇತೃತ್ವದ ವಿದ್ಯಾರ್ಥಿ ಸಂಘದಿಂದ ಆಹ್ವಾನ ನೀಡಲಾಗಿತ್ತು. ಆದರೆ, ಇದಕ್ಕೆ ಎನ್​ಎಸ್​ಯುಐ ವಿದ್ಯಾರ್ಥಿ ಸಂಘಟನೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಇದನ್ನೂ ಓದಿ :ಪದವಿ ಫಲಿತಾಂಶ ವಿಳಂಬ : ಮಂಗಳೂರು ವಿವಿ ಆಡಳಿತಸೌಧದ ಎದುರು ಎಬಿವಿಪಿ ಪ್ರತಿಭಟನೆ

ಯಾವುದೇ ಕಾರಣಕ್ಕೂ ಕಾರ್ಯಕ್ರಮ ನಡೆಯಲು ಬಿಡುವುದಿಲ್ಲ ಎಂದು ಎಬಿವಿಪಿಗೆ ಎಚ್ಚರಿಕೆ ನೀಡಿರುವ ಎನ್​ಎಸ್​ಯುಐ, ಮಂಗಳೂರು ನಗರ ಪೊಲೀಸ್ ಕಮಿಷನರ್ ಹಾಗೂ ಕಾಲೇಜು ಪ್ರಾಂಶುಪಾಲರಿಗೆ ದೂರು ನೀಡಿದೆ. ಅಲ್ಲದೇ, ಕಾರ್ಯಕ್ರಮಕ್ಕೆ ಶ್ರೀಕಾಂತ್ ಶೆಟ್ಟಿಯವರು ಅತಿಥಿಯಾಗಿ ಬಂದಲ್ಲಿ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದೆ. ಈ‌ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ ಕಾರ್ಯಕ್ರಮವನ್ನು ಮುಂದೂಡಿದೆ.

ಇದನ್ನೂ ಓದಿ :ಮಂಗಳೂರು ವಿವಿ ಹಿಜಾಬ್ ವಿವಾದ : ಕಾಲೇಜ್​ಗೆ ಬಂದ 12 ವಿದ್ಯಾರ್ಥಿನಿಯರು, ಡಿಸಿ ನಿರ್ಧಾರದ ನಿರೀಕ್ಷೆ

ಎನ್ ಎಸ್ ಯು ಐ ಮುಖಂಡ ಸುಹಾನ್ ಆಳ್ವ ಟ್ವೀಟ್ ಮಾಡಿ " ಮಂಗಳೂರಿನ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜು ಹಿಂದಿನಿಂದಲೂ ಕೆಲ ಸಂಘನೆಗಳಿಗೆ ಬೆಂಬಲ ನೀಡುತ್ತಾ ಬಂದಿದೆ. ಅದರ ಮುಂದುವರಿದ ಭಾಗವಾಗಿ ಜೂನ್ 23 ರಂದು ಕಾಲೇಜಿನಲ್ಲಿ ನಡೆಯಲಿರುವ ಪ್ರತಿಭಾ ದಿನಾಚರಣೆಗೆ ಬಾಡಿಗೆ ಭಾಷಣಕಾರ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದೆ. ಈ ಕಾರ್ಯಕ್ರಮದ ಹಿಂದೆ ರೂವಾರಿಯಾಗಿರುವ ಎಬಿವಿಪಿಗರೇ ಯಾವುದೇ ಕಾರಣಕ್ಕೂ NSUI ಸಂಘಟನೆಯು ಈ ಕಾರ್ಯಕ್ರಮವನ್ನು ನಡೆಸಲು ಬಿಡುವುದಿಲ್ಲ. ವಿದ್ಯಾರ್ಥಿಗಳನ್ನು ಮರುಳು ಮಾಡಿ ಬಾಡಿಗೆ ಭಾಷಣಕಾರರಿಗೆ ಮಾರಾಟ ಮಾಡುವ ಎಬಿವಿಪಿಯ ಸೊಕ್ಕನ್ನು ಎನ್ ಎಸ್ ಯು ಐ ಇಳಿಸುವುದು ಶತಸಿದ್ಧ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ :ಮಂಗಳೂರು ಕಾಲೇಜ್​ ಬೋರ್ಡ್​ ಮೇಲೆ ಸಾವರ್ಕರ್ ಫೋಟೋ ; ವಿದ್ಯಾರ್ಥಿಗಳ ಮಾರಾಮಾರಿ

ವಿದ್ಯಾರ್ಥಿಗಳ ನಡುವೆ ಮಾರಾಮಾರಿ : ಇನ್ನು ಕಳೆದ ವರ್ಷದ ಜೂನ್​ 10 ರಂದು ಸಾವರ್ಕರ್ ಫೋಟೋವನ್ನು ವಿವಿ ಕಾಲೇಜಿನ ಕೊಠಡಿಯಲ್ಲಿ ಹಾಕಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸಮಾನ ಮನಸ್ಕ ವಿದ್ಯಾರ್ಥಿಗಳು ವಿವಿ ಕಾಲೇಜಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಈ ವೇಳೆ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು.

ABOUT THE AUTHOR

...view details