ಮಂಗಳೂರು :ಸ್ಯಾಂಡಲ್‌ವುಡ್‌ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ಸಿಸಿಬಿ ವಿಚಾರಣೆಗೆ ಹಾಜರಾಗಲಿರುವೆ ಎಂದು ಹೇಳಿದ್ದ ಖ್ಯಾತ ಕಿರುತೆರೆ ನಿರೂಪಕಿ ಅನುಶ್ರೀ ಇಂದು ವಿಚಾರಣೆಗೆ ಹಾಜರಾಗಲಿಲ್ಲ.
ಸಿಸಿಬಿ ವಿಚಾರಣೆಗೆ ಹಾಜರಾಗದ ನಟಿ ಕಮ್ ಆ್ಯಂಕರ್ ಅನುಶ್ರೀ!! - ಸಿಸಿಬಿ ಪೊಲೀಸರು
ಅನುಶ್ರೀ ಸೆಪ್ಟೆಂಬರ್ 25 ಬೆಳಗ್ಗೆ 11ರಂದು ವಿಚಾರಣೆಗೆ ಹಾಜರಾಗಲಿದ್ದೇನೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದರು. ಆದರೆ, ಇಂದು ಅವರು ಯಾವುದೇ ವಿಚಾರಣೆಗೆ ಹಾಜರಾಗಿಲ್ಲ..
ಸಿಸಿಬಿ ಪೊಲೀಸರು ಅನುಶ್ರೀಗೆ ಸೆ.26ಕ್ಕೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರು. ಆದರೆ, ಅನುಶ್ರೀ ಸೆಪ್ಟೆಂಬರ್ 25 ಬೆಳಗ್ಗೆ 11ರಂದು ವಿಚಾರಣೆಗೆ ಹಾಜರಾಗಲಿದ್ದೇನೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದರು. ಅವರು ಇಂದು ಅವರು ಯಾವುದೇ ವಿಚಾರಣೆಗೆ ಹಾಜರಾಗಿಲ್ಲ.
ಆದ್ದರಿಂದ ನಾಳೆ ಅವರು ಮಂಗಳೂರಿನ ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.