ಕರ್ನಾಟಕ

karnataka

ETV Bharat / state

ದೆಹಲಿ‌ ಪರೇಡ್​ನಲ್ಲಿ ‌ಬೆಳ್ತಂಗಡಿಯ ಅಂಚಿತಾ ಜೈನ್: ಪ್ರಧಾನಿ ಸಮ್ಮುಖದಲ್ಲಿ ಯಕ್ಷಗಾನ ಪ್ರದರ್ಶನ - Anchita jain

ಅಂಚಿತಾ ಡಿ. ಜೈನ್ ಜ. 24ರಂದು ನಡೆದ ಗಣರಾಜ್ಯೋತ್ಸವದ ಪೂರ್ವಭಾವಿ ಪರೇಡ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಕಿರಣ್ ರಿಜು ಅರ್ಜುನ್ ಮುಂಡಾ ಮುಂತಾದ ಗಣ್ಯರ ಸಮ್ಮುಖದಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ.

Anchita jain
ಅಂಚಿತಾ ಜೈನ್

By

Published : Jan 27, 2021, 9:45 AM IST

ಬೆಳ್ತಂಗಡಿ: ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗದಲ್ಲಿ ಮೂಡಿಗೆರೆಯ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿನಿ ಅಂಚಿತಾ ಡಿ. ಜೈನ್ ದೆಹಲಿಯ ರಾಜಪಥ್​ನಲ್ಲಿ ಜರುಗಿದ ಗಣರಾಜ್ಯೋತ್ಸವದ ಪರೇಡ್​ನಲ್ಲಿ ಭಾಗವಹಿಸಿದ್ದರು.‌

ಅಂಚಿತಾ, ಜ. 24ರಂದು ನಡೆದ ಪೂರ್ವಭಾವಿ ಪರೇಡ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಕಿರಣ್ ರಿಜು, ಅರ್ಜುನ್ ಮುಂಡಾ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗಂಡುಕಲೆ ಯಕ್ಷಗಾನ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.

ಈ ಮೂಲಕ ಬೆಳ್ತಂಗಡಿ ತಾಲೂಕಿಗೆ ಹಾಗೂ ಹೆತ್ತವರಿಗೆ ಮತ್ತು ವಿದ್ಯಾ ಸಂಸ್ಥೆಗೆ ಅಂಚಿತಾ ಕೀರ್ತಿ ತಂದಿದ್ದಾರೆ.

ABOUT THE AUTHOR

...view details