ಮಂಗಳೂರು: ನಗರದಲ್ಲಿ ಖಾಸಗಿ ಆಸ್ಪತ್ರೆಯ ಆ್ಯಂಬುಲೆನ್ಸ್ವೊಂದು ರಿವರ್ಸ್ ತೆಗೆಯುವ ವೇಳೆ ಬಿದ್ದು ಪಲ್ಟಿಯಾದ ಘಟನೆ ನಡೆದಿದೆ. ಮಂಗಳೂರಿನ ಫಳ್ನೀರ್ ಎಂಬಲ್ಲಿ ಈ ಘಟನೆ ಸಂಭವಿಸಿದೆ.
ಮಂಗಳೂರು: ರಿವರ್ಸ್ ತೆಗೆಯುತ್ತಿದ್ದಾಗ 8 ಅಡಿ ಆಳಕ್ಕೆ ಬಿದ್ದ ಆ್ಯಂಬುಲೆನ್ಸ್ - ಮಂಗಳೂರಿನಲ್ಲಿ ನಡೆದ ಆ್ಯಂಬುಲೆನ್ಸ್ ಅವಘಡಗಳು
ಆ್ಯಂಬುಲೆನ್ಸ್ವೊಂದು ಮೂರು ದ್ವಿಚಕ್ರ ವಾಹನಗಳ ಮೇಲೆ ಬಿದ್ದಿದ್ದು ಅವುಗಳು ಜಖಂಗೊಂಡಿದೆ. ಘಟನೆಯಲ್ಲಿ ಅದೃಷ್ಟವಶಾತ್ ಆ್ಯಂಬುಲೆನ್ಸ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
![ಮಂಗಳೂರು: ರಿವರ್ಸ್ ತೆಗೆಯುತ್ತಿದ್ದಾಗ 8 ಅಡಿ ಆಳಕ್ಕೆ ಬಿದ್ದ ಆ್ಯಂಬುಲೆನ್ಸ್ An ambulance toppled near a private hospital in Falnir](https://etvbharatimages.akamaized.net/etvbharat/prod-images/768-512-14025079-thumbnail-3x2-mng.jpg)
An ambulance toppled near a private hospital in Falnir
ಆ್ಯಂಬುಲೆನ್ಸ್ ಚಾಲಕ ವಾಹನವನ್ನು ತೊಳೆದು ರಿವರ್ಸ್ ತೆಗೆಯುವಾಗ ಈ ಘಟನೆ ನಡೆದಿದೆ. ಚಾಲಕ ವಾಹನವನ್ನು ರಿವರ್ಸ್ ತೆಗೆಯುವಾಗ ಹಿಂದುಗಡೆ ಇದ್ದ ಆಳವನ್ನು ಗಮನಿಸಿರಲಿಲ್ಲ. ತರಾತುರಿಯಲ್ಲಿ ಹಿಂದಕ್ಕೆ ತೆಗೆದುಕೊಂಡಾಗ ವಾಹನ ಪಲ್ಟಿಯಾಗಿ 8 ಅಡಿ ಆಳಕ್ಕೆ ಬಿದ್ದಿದೆ.
ಆ್ಯಂಬುಲೆನ್ಸ್ ಮೂರು ದ್ವಿಚಕ್ರ ವಾಹನಗಳ ಮೇಲೆ ಬಿದ್ದ ಪರಿಣಾಮ ಅವು ಜಖಂ ಆಗಿವೆ. ಘಟನೆಯಲ್ಲಿ ಆ್ಯಂಬುಲೆನ್ಸ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.