ಕರ್ನಾಟಕ

karnataka

ETV Bharat / state

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪಟ್ಟಿ ಪ್ರಕಟ; ಪಾರ್ತಿಸುಬ್ಬ ಪ್ರಶಸ್ತಿಗೆ ಅಂಬಾತನಯ ಮುದ್ರಾಡಿ ಆಯ್ಕೆ

ಕರ್ನಾಟಕ ಯಕ್ಷಗಾನ ಅಕಾಡೆಮಿಯ 2019 ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕವಿ ಹಾಗೂ ಅರ್ಥಧಾರಿ ಅಂಬಾತನಯ ಮುದ್ರಾಡಿ ಆಯ್ಕೆಯಾಗಿದ್ದಾರೆ.ಹಾಗೂ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ 10 ಜನ ಕಲಾವಿದರು ಆಯ್ಕೆಯಾಗಿದ್ದಾರೆ.

By

Published : Sep 4, 2020, 11:57 PM IST

yakshagana academy award
ಪಾರ್ತಿಸುಬ್ಬ ಪ್ರಶಸ್ತಿಗೆ ಅಂಬಾತನಯ ಮುದ್ರಾಡಿ ಆಯ್ಕೆ ಪಾರ್ತಿಸುಬ್ಬ ಪ್ರಶಸ್ತಿಗೆ ಅಂಬಾತನಯ ಮುದ್ರಾಡಿ ಆಯ್ಕೆ

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2019 ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕವಿ ಹಾಗೂ ಅರ್ಥಧಾರಿ ಅಂಬಾತನಯ ಮುದ್ರಾಡಿ ಆಯ್ಕೆಯಾಗಿದ್ದಾರೆ. ಪುರಸ್ಕೃತರಿಗೆ 1 ಲಕ್ಷ ರೂ‌. ನಗದು, ಪ್ರಶಸ್ತಿ ಫಲಕ, ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಗುವುದು.

ಗೌರವ ಪ್ರಶಸ್ತಿಗೆ ಐವರು ಆಯ್ಕೆಯಾಗಿದ್ದು, ಚಂದ್ರಶೇಖರ್ ದಾಮ್ಲೆ, ಡಾ. ಆನಂದರಾಮ ಉಪಾಧ್ಯ, ರಾಮಕೃಷ್ಣ ಗುಂದಿ, ಕೆ.ಸಿ. ನಾರಾಯಣ, ಚಂದ್ರು ಕಾಳೇನಹಳ್ಳಿ ಪ್ರಶಸ್ತಿಗೆ ಆಯ್ಕೆಯಾದ ಗಣ್ಯರು. ಪುರಸ್ಕೃತರಿಗೆ ತಲಾ 50,000 ರೂ. ನಗದು, ಪ್ರಶಸ್ತಿ ಫಲಕ, ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಗುವುದು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ 10 ಜನ ಕಲಾವಿದರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಗೆ ನೆಲ್ಲೂರು ಜನಾರ್ದನ ಆಚಾರ್ಯ, ಉಬರಡ್ಕ ಉಮೇಶ ಶೆಟ್ಟಿ, ನಿಡ್ಲೆ, ಕುರಿಯ ಗಣಪತಿ ಶಾಸ್ತ್ರಿ, ಆರ್ಗೋಡು ಮೋಹನದಾಸ್ ಶೆಣೈ, ಮಹಮ್ಮದ್ ಗೌಸ್, ರಾಮಚಂದ್ರ ಹೆಗಡೆ, ಎಂ.ಎನ್.ಹೆಗಡೆ, ಹಾರಾಡಿ ಸರ್ವೋತ್ತಮ ಗಾಣಿಗ, ಮುಖವೀಣೆ ರಾಜಣ್ಣ, ಎ.ಜಿ.ಅಶ್ವಥ ನಾರಾಯಣರವರನ್ನು ಆಯ್ಕೆ ಮಾಡಲಾಗಿದೆ. ಪುರಸ್ಕೃತರಿಗೆ ತಲಾ 25,000 ರೂ. ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಗುವುದು.
ಹೊಸ್ತೋಟ ಮಂಜುನಾಥ ಭಾಗವತ್, ಕೃಷ್ಣಪ್ರಕಾಶ ಉಳಿತ್ತಾಯ, ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ಇವರನ್ನು ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಪುಸ್ತಕ ಬಹುಮಾನ ಪುರಸ್ಕೃತರಿಗೆ ತಲಾ 25,000 ರೂ. ನಗದು ಹಾಗೂ ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಗುತ್ತದೆ.
ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ವಾರ್ಷಿಕ ಮತ್ತು ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸರಕಾರದ ನಿಯಮದಂತೆ 4 ವಿಭಾಗಗಳಲ್ಲಿ 19 ಜನ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನವನ್ನು 2020ರ ಅಕ್ಟೋಬರ್ ತಿಂಗಳಿನಲ್ಲಿ ನೀಡಲಾಗುತ್ತದೆ.‌ ಪಾರ್ತಿಸುಬ್ಬ ಪ್ರಶಸ್ತಿ, ಯಕ್ಷಸಿರಿ ಮತ್ತು ಗೌರವ ಪ್ರಶಸ್ತಿಯನ್ನು ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಹಾಲ್‍ನಲ್ಲಿ ಅಂಬಾತನಯ ಮುದ್ರಾಡಿ ಉಡುಪಿ, ಮಹಮ್ಮದ್ ಗೌಸ್ ಉಡುಪಿ, ಆರ್ಗೋಡು ಮೋಹನದಾಸ್ ಶೆಣೈ ಕಮಲಶಿಲೆ, ಹಾರಾಡಿ ಸರ್ವ ಗಾಣಿಗ ಹಾಗೂ ನೆಲ್ಲೂರು ಜನಾರ್ಧನ ಆಚಾರ್ಯ ಚಿಕ್ಕಮಗಳೂರುರವರಿಗೆ ನೀಡಲಾಗುವುದು.
ಯಕ್ಷಸಿರಿ, ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನವನ್ನು ಚಂದ್ರಶೇಖರ್ ದಾಮ್ಲೆ ಸುಳ್ಯ, ಉಬರಡ್ಕ ಉಮೇಶ ಶೆಟ್ಟಿ ಸುಳ್ಯ, ಕುರಿಯ ಗಣಪತಿ ಶಾಸ್ತ್ರಿ ಕಾಸರಗೋಡು, ಹೊಸ್ತೋಟ ಮಂಜುನಾಥ ಭಗವತರು, ಶ್ರೀ ಗುರುದೇವ ಪ್ರಕಾಶನ ಒಡಿಯೂರು, ಕೃಷ್ಣಪ್ರಕಾಶ ಉಳಿತ್ತಾಯ ಮಂಗಳೂರು ಇವರಿಗೆ ನೀಡಲಾಗುವುದು. ಇವರಿಗೆ ಮಂಗಳೂರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಚಾವಡಿಯಲ್ಲಿ ಪ್ರಶಸ್ತಿ ಪುರಸ್ಕಾರ ಮಾಡಲಾಗುತ್ತದೆ.
ಯಕ್ಷಸಿರಿ ಮತ್ತು ಗೌರವ ಪ್ರಶಸ್ತಿಯನ್ನು ಡಾ. ಆನಂದರಾಮ ಉಪಾಧ್ಯ ಬೆಂಗಳೂರು, ಚಂದ್ರು ಕಾಳೇನಹಳ್ಳಿ ಚನ್ನರಾಯಪಟ್ಟಣ, ಕೆ.ಸಿ.ನಾರಾಯಣ ಬೆಂಗಳೂರು ಗ್ರಾಮಾಂತರ, ಬಿ. ರಾಜಣ್ಣ, ತುಮಕೂರು, ಎ.ಜಿ. ಅಶ್ವತ್ಥ ನಾರಾಯಣ ತುಮಕೂರು, ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ತುಮಕೂರು ಇವರಿಗೆ ನೀಡಲಾಗುವುದು. ಪ್ರಶಸ್ತಿ ಪುರಸ್ಕೃತರಿಗೆ ಈ ಪ್ರಶಸ್ತಿಯನ್ನು ತುಮಕೂರಿನ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನೀಡಲಾಗುತ್ತದೆ.
ಯಕ್ಷಸಿರಿ ಮತ್ತು ಗೌರವ ಪ್ರಶಸ್ತಿಯನ್ನು ರಾಮಕೃಷ್ಣ ಗುಂದಿ ಉತ್ತರ ಕನ್ನಡ, ಮೂರೂರು ರಾಮಚಂದ್ರ ಹೆಗಡೆ, ಎಂ.ಎನ್. ಹೆಗಡೆ ಹಳವಳ್ಳಿ ಉತ್ತರ ಕನ್ನಡ ಇವರಿಗೆ ನೀಡಲಾಗುವುದು. ಇವರಿಗೆ ಉತ್ತರ ಕನ್ನಡದ ಪುರಭವನದಲ್ಲಿ ಪ್ರಶಸ್ತಿ ನೀಡಲಾಗುತ್ತದೆ ಎಂದು ಬೆಂಗಳೂರು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರ ಪ್ರೊ.ಎಂ.ಎ ಹೆಗಡೆ ಪ್ರಕಟಣೆ ತಿಳಿಸಿದೆ.

ABOUT THE AUTHOR

...view details