ಮೂಡುಬಿದಿರೆ: ಗೂಡ್ಸ್ ಟೆಂಪೋ ಹಾಗೂ ಟ್ಯಾಂಕರ್ ನಡುವಿನ ಅಪಘಾತದಲ್ಲಿ ಯುವಕ ಮೃತಪಟ್ಟ ಘಟನೆ ತಾಲೂಕಿನ ಶಿರ್ತಾಡಿಯಲ್ಲಿ ನಡೆದಿದೆ.
ಪಾರ್ಸಲ್ ಕೊಟ್ಟು ಹಿಂದಿರುಗುತ್ತಿದ್ದಾಗ ಅಪಘಾತ: ಅಮೆಜಾನ್ ಡೆಲಿವರಿ ಬಾಯ್ ಸಾವು - Amazon delivery boy death in accident
ಪಾರ್ಸಲ್ ಡೆಲಿವರಿ ಕೊಟ್ಟು ಹಿಂತಿರುಗುತ್ತಿದ್ದಾಗ ಅಪಘಾತವಾಗಿ ಅಮೆಜಾನ್ ಕಂಪೆನಿಯ ಡಿಲೆವರಿ ಬಾಯ್ ಭವಿಷ್ ಶೆಟ್ಟಿ ಎಂಬಾತ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ನಡೆದಿದೆ.

ಅಮೆಜಾನ್ ಡೆಲಿವರಿ ಬಾಯ್ ಸಾವು
ಉಜಿರೆಯ ನೇಕಾರಪೇಟೆ ಬಳಿಯ ಲಾಯಿಲ ನಿವಾಸಿ ಭವಿಷ್ ಶೆಟ್ಟಿ ಮೃತ ದುರ್ದೈವಿ. ಮೂಡುಬಿದಿರೆಯಲ್ಲಿ ಉದ್ಯೋಗದಲ್ಲಿರುವ ಭವಿಷ್ ಶೆಟ್ಟಿ ಅಮೆಜಾನ್ ಕಂಪೆನಿಯ ಪಾರ್ಸಲ್ ಡೆಲಿವರಿ ಕೊಟ್ಟು ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಘಟನೆಯಲ್ಲಿ ಭವಿಷ್ ಶೆಟ್ಟಿ ತಲೆಗೆ ಗಂಭೀರವಾದ ಗಾಯಗಳಾಗಿದ್ದರಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.