ಕರ್ನಾಟಕ

karnataka

ETV Bharat / state

4ನೇ ಏಷ್ಯಾ ವಿಶ್ವ ಮಾದರಿ ಸಂಯುಕ್ತ ರಾಷ್ಟ್ರ ಮೀಟ್‍ಗೆ ಆಳ್ವಾಸ್ ವಿದ್ಯಾರ್ಥಿ ಆಯ್ಕೆ - ಮಂಗಳೂರು:

ಆಳ್ವಾಸ್ ಇನ್‍ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನ ಎಂಬಿಎ ವಿದ್ಯಾರ್ಥಿ ವರುಣ್ ಕಟ್ಟಿ ಇಂಡೋನೇಷಿಯಾದ ಬಾಲಿಯಲ್ಲಿ ಜುಲೈ 3ರಿಂದ 6ರವರೆಗೆ ನಡೆಯಲಿರುವ ನಾಲ್ಕನೇ ಏಷ್ಯಾ ವಿಶ್ವ ಮಾದರಿ ಸಂಯುಕ್ತ ರಾಷ್ಟ್ರ-2020ಕ್ಕೆ ಆಯ್ಕೆಯಾಗಿದ್ದಾರೆ.

Alvas Student
ಆಳ್ವಾಸ್ ವಿದ್ಯಾರ್ಥಿ ವರುಣ್ ಕಟ್ಟಿ

By

Published : Feb 10, 2020, 8:38 PM IST

ಮಂಗಳೂರು:ಇಂಡೋನೇಷಿಯಾದ ಬಾಲಿಯಲ್ಲಿ ಜುಲೈ 3ರಿಂದ 6ರವರೆಗೆ ನಡೆಯಲಿರುವ ನಾಲ್ಕನೇ ಏಷ್ಯಾ ವಿಶ್ವ ಮಾದರಿ ಸಂಯುಕ್ತ ರಾಷ್ಟ್ರ-2020ಕ್ಕೆ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಆಯ್ಕೆಯಾಗಿದ್ದಾರೆ.

ಆಳ್ವಾಸ್ ಇನ್‍ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನ ಎಂಬಿಎ ವಿದ್ಯಾರ್ಥಿ ವರುಣ್ ಕಟ್ಟಿ ಆಯ್ಕೆಯಾದ ವಿದ್ಯಾರ್ಥಿ.`ಕ್ರಿಯಾತ್ಮಕ ಭದ್ರತಾ ಆಯಾಮಗಳಲ್ಲಿ ಶಾಂತಿಯನ್ನು ಕಾಪಾಡುವುದು ಎಂಬ ವಿಷಯದ ಕುರಿತು ಅವರು ನಾಲ್ಕನೇ ಏಷ್ಯಾ ವಿಶ್ವ ಮಾದರಿ ಸಂಯುಕ್ತ ರಾಷ್ಟ್ರ-2020ರಲ್ಲಿ ಮಾತನಾಡಲಿದ್ದಾರೆ.

ಜಾಗತಿಕ ಮಂಡಳಿಯಲ್ಲಿ ಭಾಗವಹಿಸಲು ನಾನಾ ದೇಶಗಳಿಂದ ಬಂದ 3500 ಅರ್ಜಿಗಳಲ್ಲಿ 4.33% ಜನರನ್ನು ಆಯ್ಕೆ ಮಾಡಲಾಗುತ್ತದೆ. ಶೈಕ್ಷಣಿಕ ಸಾಧನೆಯ ಆಧಾರದಲ್ಲಿ ವರುಣ್‍ನನ್ನು ಆಯ್ಕೆ ಮಾಡಲಾಗಿದೆ. ವಿವಿಧ ರಾಷ್ಟ್ರಗಳಿಂದ ಪ್ರತಿನಿಧಿಯಾಗಿ ಭಾಗವಹಿಸಿದ ಸ್ಪರ್ಧಾಳು ನೈಜ ಜಾಗತಿಕಮಟ್ಟದ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಸಂಶೋಧನೆ, ಡ್ರಾಫ್ಟಿಂಗ್​ ಹಾಗೂ ಡಿಬೇಟ್ ಮೂಲಕ ತಮ್ಮ ದೃಷ್ಟಿಕೋನವನ್ನು ವ್ಯಕ್ತಪಡಿಸಲು ಅವಕಾಶವಿದೆ.

For All Latest Updates

ABOUT THE AUTHOR

...view details