ಕರ್ನಾಟಕ

karnataka

ETV Bharat / state

ಹೊರ ರಾಜ್ಯದವರಿಗೆ ಉದ್ಯೋಗ ನೀಡಿದ ಆರೋಪ: ತನಿಖೆ ಆರಂಭಿಸಿದ ಎಂಆರ್​ಪಿಎಲ್​​

ಮುಖ್ಯ ಜಾಗೃತ ಅಧಿಕಾರಿ ನೇತೃತ್ವದಲ್ಲಿ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಥಳೀಯರನ್ನು ನಿರ್ಲಕ್ಷಿಸಿ ಹೊರ ರಾಜ್ಯದವರಿಗೆ ಮಣೆ ಹಾಕಲಾಗಿದೆ ಎಂಬ ಜನಪ್ರತಿನಿಧಿಗಳ ಕಳವಳದ ಬಗ್ಗೆ ತನಿಖೆ ಆರಂಭಿಸಲಾಗುತ್ತದೆ ಎಂದು ಎಂಆರ್​ಪಿಎಲ್​ ತಿಳಿಸಿದೆ.

Allegations of employment to outsiders in MRPL
ತನಿಖೆ ಆರಂಭಿಸಿದ ಎಂಆರ್ ಪಿಎಲ್

By

Published : May 28, 2021, 11:32 AM IST

ಮಂಗಳೂರು: ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಥಳೀಯರನ್ನು ನಿರ್ಲಕ್ಷಿಸಿ ಹೊರ ರಾಜ್ಯದವರಿಗೆ ಮಣೆ ಹಾಕಲಾಗಿದೆ ಎಂಬ ಜನಪ್ರತಿನಿಧಿಗಳ ಕಳವಳದ ಬಗ್ಗೆ ತನಿಖೆ ಆರಂಭಿಸಲಾಗುತ್ತದೆ. ಮುಖ್ಯ ಜಾಗೃತ ಅಧಿಕಾರಿ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಕೇಂದ್ರ ಜಾಗೃತ ಆಯೋಗಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ಎಂಆರ್​ಪಿಎಲ್​ ತಿಳಿಸಿದೆ.

ಸಂಬಂಧಿತ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ನ್ಯಾಯಯುತ ಹಾಗೂ ಪಾರದರ್ಶಕ ಪ್ರಕ್ರಿಯೆಗೆ ಬದ್ಧತೆ ಪ್ರದರ್ಶಿಸಲಿದೆ. ಎಂಆರ್​ಪಿಎಲ್ ಸಂಸ್ಥೆಯಲ್ಲಿ ಶೇ. 70ಕ್ಕಿಂತ ಅಧಿಕ ಉದ್ಯೋಗಿಗಳು ಕರ್ನಾಟಕದವರಾಗಿದ್ದಾರೆ. ಮ್ಯಾನೇಜ್​ಮೆಂಟ್ ಹೊರತಾಗಿರುವ ವಿಭಾಗದ ಶೇ. 90ರಷ್ಟು ಸಿಬ್ಬಂದಿ ರಾಜ್ಯದವರಾಗಿದ್ದಾರೆ. ಕಂಪನಿ ಸ್ಥಾಪನೆಗೆ ಹಾಗೂ ವಿಸ್ತರಣೆಗಾಗಿ ಭೂಮಿ ನೀಡಿರುವ ಕುಟುಂಬಸ್ಥರ 600ಕ್ಕೂ ಅಧಿಕ ಸದಸ್ಯರಿಗೆ ಎಂಆರ್​ಪಿಎಲ್​​ನಲ್ಲಿ ಉದ್ಯೋಗ ನೀಡಲಾಗಿದೆ.

ಕರ್ನಾಟಕದಲ್ಲಿನ ಎಂಆರ್​​ಪಿಎಲ್​​ನ ಚಟುವಟಿಕೆಗಳಲ್ಲಿ ಸುಮಾರು 150 ಕೋಟಿ ರೂ. ಪಾಲು ಸಲ್ಲಿಸಿದೆ. ಈ ಪೈಕಿ ದ.ಕ ಜಿಲ್ಲೆಯೊಂದಕ್ಕೇ 120 ಕೋಟಿ ರೂ. ನೀಡಿದೆ. ಕೋವಿಡ್ ಸೋಂಕಿನ ಭೀತಿಯ ನಡುವೆಯೂ ರಿಫೈನರಿಯನ್ನು ಸದಾ ನಡೆಸುತ್ತಾ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್, ಎಲ್​ಪಿಜಿಯನ್ನು ನಿರಂತರ ಪೂರೈಕೆ ಮಾಡುತ್ತಿದೆ ಎಂದು ಎಂಆರ್​​ಪಿಎಲ್ ತಿಳಿಸಿದೆ.

ABOUT THE AUTHOR

...view details