ಪುತ್ತೂರು: ವಾಹನಗಳ ಗ್ಲಾಸ್ಗಳಲ್ಲಿ ಟಿಂಟ್ ಅಳವಡಿಕೆ ನಿಷಿದ್ಧ ಎನ್ನುವ ತೀರ್ಪನ್ನು ಸುಪ್ರೀಂಕೋರ್ಟ್ ಈಗಾಗಲೇ ನೀಡಿದ್ದರೂ, ಕೂಡ ನಿಯಮಗಳನ್ನು ಕೆಲವು ವಾಹನಗಳು ಗಾಳಿಗೆ ತೂರುತ್ತಿರುವುದು ಕಂಡುಬರುತ್ತಿದೆ. ಅದರಲ್ಲೂ ಪುತ್ತೂರು ಭಾಗದಲ್ಲಿ ಸಂಚರಿಸುತ್ತಿರುವಂತಹ ಕೆಲವು ಖಾಸಗಿ ಆ್ಯಂಬುಲೆನ್ಸ್ಗಳು ನಿಯಮಗಳನ್ನು ಉಲ್ಲಂಘಿಸುತ್ತಿವೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ಗ್ಲಾಸ್ಗಳಲ್ಲಿ ಟಿಂಟ್ ಅಳವಡಿಸಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿವೆಯಾ ಖಾಸಗಿ ಆ್ಯಂಬುಲೆನ್ಸ್ಗಳು? - tint case latest news
ಖಾಸಗಿ ಆ್ಯಂಬುಲೆನ್ಸ್ಗಳಲ್ಲಿ ಟಿಂಟ್ ಅಳವಡಿಸಿ ಅಕ್ರಮವಾಗಿ ಮದ್ಯ ಸಾಗಣೆ ಸೇರಿದಂತೆ ಹಲವು ರೀತಿಯ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿವೆ ಎನ್ನುವ ಆರೋಪಗಳು ಕೇಳಿ ಬಂದಿವೆ.
ಆ್ಯಂಬುಲೆನ್ಸ್ಗಳಲ್ಲೂ ಟಿಂಟ್ ಬಳಸಬಾರದು ಎನ್ನುವ ನಿಯಮವಿದ್ದರೂ ಕೂಡ ಕೆಲವು ಆ್ಯಂಬುಲೆನ್ಸ್ಗಳಲ್ಲಿ ಟಿಂಟ್ಗಳನ್ನು ಅಳವಡಿಸಲಾಗಿದೆ. ಈ ರೀತಿ ಟಿಂಟ್ ಹಾಕಿರುವ ಆ್ಯಂಬುಲೆನ್ಸ್ಗಳು ಅಕ್ರಮವಾಗಿ ಮದ್ಯ ಸಾಗಣೆ ಸೇರಿದಂತೆ ಹಲವು ರೀತಿಯ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ ಎನ್ನಲಾಗುತ್ತಿದೆ. ಅಲ್ಲದೇ ರೋಗಿಗಳನ್ನು ಸಾಗಿಸುವ ಕೆಲಸ ಮಾಡಬೇಕಿದ್ದ ಆ್ಯಂಬುಲೆಲ್ಸ್ಗಳು, ಬೇರೆ ರೀತಿಯ ಅವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಎಲ್ಲಾ ಆ್ಯಂಬುಲೆನ್ಸ್ಗಳ ಬಗ್ಗೆ ಕಟ್ಟುನಿಟ್ಟಿನ ತನಿಖೆ ನಡೆಯಬೇಕಿದೆ ಎನ್ನುವ ಒತ್ತಾಯ ಕೇಳಿ ಬರುತ್ತಿದೆ.
ಆ್ಯಂಬುಲೆನ್ಸ್ಗಳಿಗೆ ಸಾಮಾನ್ಯವಾಗಿ ಎಲ್ಲಾ ರಸ್ತೆ ತನಿಖೆಗಳಿಂದ ಮುಕ್ತವಾಗಿ ಸಂಚಾರ ನಡೆಸಲು ಇರುವ ಅವಕಾಶವನ್ನೇ ಈ ಆ್ಯಂಬುಲೆನ್ಸ್ಗಳ ಚಾಲಕರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ, ಕೆಲವು ಖಾಸಗಿ ಆ್ಯಂಬುಲೆನ್ಸ್ಗಳು ಹಗಲು ಪೂರ್ತಿ ಯಾವುದೋ ಒಂದು ಕಡೆಯಲ್ಲಿ ಪಾರ್ಕ್ ಮಾಡಿಕೊಂಡು ರಾತ್ರಿಯಾಗುತ್ತಿದ್ದಂತೆ ತಮ್ಮ ಕಾರ್ಯ ಆರಂಭಿಸುತ್ತದೆ. ಹಗಲು ಯಾವುದೇ ತುರ್ತು ಕರೆ ಸ್ವೀಕರಿಸದ ಈ ಆ್ಯಂಬುಲೆನ್ಸ್ಗಳು ರಾತ್ರಿ ವೇಳೆಯಲ್ಲಿ ಮಾತ್ರ ಕಾರ್ಯಾಚರಣೆಗೆ ಇಳಿಯುವ ಹಿಂದಿನ ರಹಸ್ಯದ ಬಗ್ಗೆಯೂ ಇದೀಗ ಅನುಮಾನಗಳು ಮೂಡಲಾರಂಭಿಸಿದೆ. ಹಾಗಾಗಿ ತನಿಖೆ ನಡೆಯಬೇಕಿದೆ ಎನ್ನುವ ಒತ್ತಾಯ ಕೇಳಿ ಬರುತ್ತಿದೆ.