ಕರ್ನಾಟಕ

karnataka

ETV Bharat / state

ಪುತ್ತೂರಿನಲ್ಲಿ ಲವ್ ಜಿಹಾದ್ ಆರೋಪ: ಯುವಕನ ವಿಚಾರಣೆ - ಹಿಂದೂ ಜಾಗರಣ ವೇದಿಕೆ

ಹಿಂದೂ ಯುವತಿಗೆ ಪುತ್ತೂರಿನಲ್ಲಿ ಮಾರ್ಕೆಟಿಂಗ್ ಕೆಲಸ ಕೊಡಿಸುವ ಆಮಿಷ ತೋರಿಸಿ ಲವ್ ಜಿಹಾದ್‌ಗೆ ಯತ್ನಿಸಿದ್ದಾನೆ ಎಂಬ ಆರೋಪದಲ್ಲಿ ಅನ್ಯ ಕೋವಿನ ಯುವಕನನ್ನು ಪುತ್ತೂರಿನಲ್ಲಿ ಬಂಧಿಸಲಾಗಿದೆ.

allegation-of-love-jihad-by-young-man-in-puttur
ಪುತ್ತೂರಿನಲ್ಲಿ ಲವ್ ಜಿಹಾದ್ ಆರೋಪ

By

Published : Sep 16, 2022, 3:46 PM IST

ಪುತ್ತೂರು(ದಕ್ಷಿಣ ಕನ್ನಡ): ಕುಂದಾಪುರ ಮೂಲದ ಹಿಂದೂ ಯುವತಿ ಹಾಗೂ ಕೋಟೇಶ್ವರದ ಅನ್ಯಕೋಮಿನ ಹುಡುಗ ಜೊತೆಯಾಗಿ ಪುತ್ತೂರಿನಲ್ಲಿ ಪತ್ತೆಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಅನ್ಯಕೋಮಿನ ಯುವಕನನ್ನು ತಡೆದು ವಿಚಾರಿಸಿದ್ದು, ಹಿಂದೂ ಯುವತಿಗೆ ಪುತ್ತೂರಿನಲ್ಲಿ ಮಾರ್ಕೆಟಿಂಗ್ ಕೆಲಸ ಕೊಡಿಸುವ ಆಮಿಷ ತೋರಿಸಿ ಈತ ಲವ್ ಜಿಹಾದ್‌ಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಇವರಿಬ್ಬರ ಬಗ್ಗೆ ತಿಳಿದಿದ್ದ ಕುಂದಾಪುರದ ಹಿಂದೂ ಸಂಘಟನೆಗಳು ಪುತ್ತೂರಿನ ಸಂಘಟನೆ ಅವರಿಗೆ ಮಾಹಿತಿಯನ್ನು ನೀಡಿದ್ದು, ಇದೀಗ ಇವರಿಬ್ಬರನ್ನು ಹಿಂದೂ ಕಾರ್ಯಕರ್ತರು ಪುತ್ತೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ನಗರ ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಚಾಕು ತೋರಿಸಿ ಅತ್ಯಾಚಾರಕ್ಕೆ ಯತ್ನ.. ತಡವಾಗಿ ದೂರು ನೀಡಿದ‌ ಮಹಿಳೆ

ABOUT THE AUTHOR

...view details