ಕರ್ನಾಟಕ

karnataka

ETV Bharat / state

ಕೊರಗಜ್ಜ ದೈವಕ್ಕೆ ಅವಮಾನ ಆರೋಪ: ವಿಟ್ಲ ಪೊಲೀಸರಿಂದ ಇಬ್ಬರ ಬಂಧನ - Allegation of dishonor to Koragajja

ಸಾಲೆತ್ತೂರಿನಲ್ಲಿ ಅನ್ಯ ಧರ್ಮದ ಮದುಮಗನೊಬ್ಬ ಕೊರಗಜ್ಜ ದೈವ ಹೋಲುವ ವೇಷ ಧರಿಸಿ, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Two arrested by vitla Police
ವಿಟ್ಲ ಪೊಲೀಸರಿಂದ ಇಬ್ಬರ ಬಂಧನ

By

Published : Jan 11, 2022, 4:15 PM IST

ಬಂಟ್ವಾಳ:ಕೊರಗಜ್ಜನ ವೇಷ ಧರಿಸಿ ಅವಮಾನ ಮಾಡಿದ ಆರೋಪ ಪ್ರಕರಣ ಕಾವೇರುತ್ತಿದ್ದಂತೆಯೇ ವಿಟ್ಲ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಮಂಗಳವಾರ ಈ ಸಂಬಂಧ ಹಿಂದೂ ಜಾಗರಣಾ ವೇದಿಕೆಯಿಂದ ವಿಟ್ಲದಲ್ಲಿ ಪ್ರತಿಭಟನೆ ನಡೆಸಲಾಯಿತು.

ಹಿಂದು ಜಾಗರಣಾ ವೇದಿಕೆ ವತಿಯಿಂದ ವಿಟ್ಲದಲ್ಲಿ ಪ್ರತಿಭಟನೆ

ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು ಎಂಬಲ್ಲಿ ಅನ್ಯ ಧರ್ಮದ ಮದುವೆ ಮನೆಯಲ್ಲಿ ಹಿಂದೂಗಳ ಆರಾಧ್ಯ ದೈವ ಸ್ವಾಮಿ ಕೊರಗಜ್ಜನ ವೇಷವನ್ನು ವರ ಧರಿಸಿದ್ದ ಎನ್ನಲಾಗ್ತಿದೆ. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಹಲವರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: 'ಅವರನ್ನು ಹುಚ್ಚರಂತೆ ಬೀದಿ ಮೆರವಣಿಗೆ ಮಾಡಿಸುವೆ': ಕೊರಗಜ್ಜ ದೈವದ ನುಡಿ

ಮಂಗಲ್ಪಡಿ ನಿವಾಸಿ, ಅಹ್ಮದ್ ಮುಜಿತಾಬು (28), ಬಾಯಾರು ಪದವು ನಿವಾಸಿ ಮೊಯ್ದೀನ್ ಮುನಿಶ್ (19) ಬಂಧಿತರು.

ವಿಟ್ಲ ಪೇಟೆ ಬಂದ್:

ಹಿಂದೂ ಜಾಗರಣಾ ವೇದಿಕೆ ಕರೆ ನೀಡಿದ ಬಂಟ್ವಾಳ ತಾಲೂಕಿನ ವಿಟ್ಲ ಪೇಟೆ ಬಂದ್​ಗೆ ಬಹುತೇಕ ಅಂಗಡಿ ಮಾಲೀಕರು ಬೆಂಬಲ ಸೂಚಿಸಿದ್ದು, ಘಟನೆಯನ್ನು ಖಂಡಿಸಿ ವಿಟ್ಲದಲ್ಲಿ ಪ್ರತಿಭಟನೆ ನಡೆಸಲಾಯಿತು. ಇಂದಿನವರೆಗೂ ಆರೋಪಿಗಳನ್ನು ಬಂಧಿಸಲು ತಡ ಮಾಡಿದ ಕಾರಣ ಬಂದ್​ಗೆ ಕರೆ ನೀಡಲಾಗಿತ್ತು.

ABOUT THE AUTHOR

...view details