ಕರ್ನಾಟಕ

karnataka

ETV Bharat / state

ಎಲ್ಲರೂ 30 ದಿನಗಳ ಕಾಲ ಮನೆಯಲ್ಲೇ ಇರಿ: ಶಾಸಕ ವೇದವ್ಯಾಸ ಕಾಮತ್

ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಎಲ್ಲರೂ 30 ದಿನಗಳ ಕಾಲ ಮನೆಯಲ್ಲೇ ಇದ್ದರೆ ಒಳಿತು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಎಚ್ಚರಿಸಿದ್ದಾರೆ.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್

By

Published : Jul 1, 2020, 11:07 PM IST

ಮಂಗಳೂರು: ಕರಾವಳಿಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಅಧಿಕವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ 30 ದಿನಗಳ ಕಾಲ ಮನೆಯಲ್ಲೇ ಇದ್ದರೆ ಒಳಿತು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಎಚ್ಚರಿಸಿದ್ದಾರೆ.

ಫೇಸ್ ಬುಕ್ ಪೇಜ್​ನಲ್ಲಿ ಎಚ್ಚರಿಕೆ ನೀಡಿದ ಶಾಸಕ​

ಮಂಗಳೂರಿನಲ್ಲಿ ಕೋವಿಡ್ ಸೋಂಕು ಗಂಭೀರ ತಿರುವು ಪಡೆಯುತ್ತಿದ್ದು, ನಾವು ಮುನ್ನೆಚ್ಚರಿಕೆ ವಹಿಸುವುದರೊಂದಿಗೆ ಪ್ರತೀ ಕ್ಷಣವೂ ಅಲರ್ಟ್ ಆಗಿರಬೇಕು. ಆದ್ದರಿಂದ ಮುಂದಿನ 30 ದಿನಗಳವರೆಗೆ ಸ್ವಯಂಪ್ರೇರಣೆಯಿಂದ ಮನೆಯಲ್ಲೇ ಇದ್ದರೆ ಸೋಂಕನ್ನು ಸ್ವಲ್ಪಮಟ್ಟಿಗೆ ಹಿಮ್ಮೆಟ್ಟಿಸಲು ಸಾಧ್ಯ ಎಂದು ಸೂಚಿಸಿದ್ದಾರೆ.

ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಅಬ್ಬರಕ್ಕೆ ಮಂಗಳೂರು ನಲುಗುತ್ತಿದ್ದು, ಜಿಲ್ಲೆಯಾದ್ಯಂತ 100ಕ್ಕೂ ಅಧಿಕ ಕಂಟೈನ್​​ಮೆಂಟ್​ ಝೋನ್‌ಗಳಿವೆ. ವೈದ್ಯರು, ಪೊಲೀಸರು ಸೇರಿ ನಗರದ ಗಲ್ಲಿ ಗಲ್ಲಿಗೂ ಮಾರಕ ವೈರಸ್ ಹಬ್ಬುತ್ತಿದೆ. ಆದ್ದರಿಂದ ಎಲ್ಲರೂ ಎಚ್ಚರಿಕೆಯಿಂದ ಇದ್ದರೆ ಸೂಕ್ತ ಎಂದು ತಮ್ಮ ಫೇಸ್ ಬುಕ್ ಪೇಜ್​ನಲ್ಲಿ ಮಂಗಳೂರು ನಾಗರಿಕರಿಗೆ ವೇದವ್ಯಾಸ ಕಾಮತ್ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details