ಕರ್ನಾಟಕ

karnataka

ETV Bharat / state

ಸಾಮಾಜಿಕ ಕೆಲಸದಲ್ಲಿ ಎಲ್ಲ ಪಕ್ಷದವರು ಸಹಾಯ ಮಾಡಿದ್ದಾರೆ, ವಿವಾದ ಮಾಡಬೇಡಿ: ಹರೇಕಳ ಹಾಜಬ್ಬ - ಹರೇಕಳ ಹಾಜಬ್ಬ

ನಾಯಕರೊಬ್ಬರ ಆಹ್ವಾನದ ಮೇರೆಗೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಹೋಗಿದ್ದ ಹರೇಕಳ ಹಾಜಬ್ಬ ಅವರು ಪಕ್ಷದ ಕಾರ್ಯಕ್ರಮವೆಂದು ತಿಳಿದು ವಾಪಸ್​ ಬಂದಿದ್ದರು.

Padmashri Awardee Harekala Hajabba
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ

By

Published : Aug 17, 2023, 1:04 PM IST

ಮಂಗಳೂರು: ನನ್ನ ಸಾಮಾಜಿಕ ಕೆಲಸದಲ್ಲಿ ಎಲ್ಲ ಪಕ್ಷದವರೂ ಸಹಾಯ ಮಾಡಿದ್ದಾರೆ. ದಯವಿಟ್ಟು ವಿವಾದ ಮಾಡಬೇಡಿ ಎಂದು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ವಿನಂತಿಸಿದ್ದಾರೆ. ಆಗಸ್ಟ್​ 14 ರಂದು ಪಕ್ಷವೊಂದರ ಜಿಲ್ಲಾ ಘಟಕದಿಂದ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ "ದೇಶ ವಿಭಜನೆ ಒಂದು ದುರಂತ ಕಥೆ ಸ್ಮೃತಿ" ಕಾರ್ಯಕ್ರಮಕ್ಕೆ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಆಹ್ವಾನಿಸಲಾಗಿತ್ತು. ಇದು ಸ್ವಾತಂತ್ರ್ಯೋತ್ಸವದ ಸರಕಾರಿ ಕಾರ್ಯಕ್ರಮ ಎಂದು ಹರೇಕಳ ಹಾಜಬ್ಬ ಹೋಗಿದ್ದರು. ಆದರೆ ಅಲ್ಲಿಗೆ ಹೋದ ಬಳಿಕ ಅವರಿಗೆ ಇದೊಂದು ಪಕ್ಷದ ಕಾರ್ಯಕ್ರಮ ಎಂದು ಗೊತ್ತಾಗಿ ವಾಪಸಾಗಿದ್ದಾರೆ.

ನನಗೆ ಯಾವುದೇ ವಿವಾದಗಳಲ್ಲಿ ಸಿಲುಕಲು ಇಷ್ಟವಿಲ್ಲದ ಕಾರಣ ಅದರಲ್ಲಿ ಪಾಲ್ಗೊಳ್ಳದೇ ಮರಳಿದ್ದೇನೆ. ದಯವಿಟ್ಟು ಇದನ್ನು ವಿವಾದ ಮಾಡಬೇಡಿ. ನನ್ನ ಸಾಮಾಜಿಕ ಕೆಲಸದಲ್ಲಿ ಎಲ್ಲ ಪಕ್ಷದವರೂ ಸಹಾಯ ಮಾಡಿದ್ದಾರೆ. ಬೆಂಗಳೂರಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಪಕ್ಷದ ನಾಯಕರೊಬ್ಬರ ಆಹ್ವಾನದ ಮೇರೆಗೆ ತೆರಳಿದ್ದೆ. ಅದು ಸ್ವಾತಂತ್ರೋತ್ಸವದ ಸರ್ಕಾರಿ ಕಾರ್ಯಕ್ರಮ ಎಂದು ಭಾವಿಸಿ ಹೋಗಿದ್ದೆ. ಅಲ್ಲಿ ಹೋದ ಬಳಿಕ ಪಕ್ಷದ ಕಾರ್ಯಕ್ರಮ ಎಂದು ಗೊತ್ತಾಯಿತು ಎಂದು ಹಾಜಬ್ಬ ತಿಳಿಸಿದ್ದಾರೆ.

"ನಾನು ಯಾವ ರಾಜಕೀಯ ಪಕ್ಷಕ್ಕೂ ಸೇರಿದವನಲ್ಲ. ನನಗೆ ರಾಜಕೀಯ ಆಕಾಂಕ್ಷೆಗಳೂ ಇಲ್ಲ. ಶಿಕ್ಷಣ ಕ್ಷೇತ್ರದಲ್ಲಿ ನನ್ನ ಊರಿನ ಬಡಮಕ್ಕಳ ಸಲುವಾಗಿ ಕೆಲಸ ಮಾಡುತ್ತಿದ್ದೇನೆ. ದಯವಿಟ್ಟು ನನ್ನನ್ನು ರಾಜಕೀಯ ಕಾರ್ಯಕ್ರಮಗಳಿಗೆ ಕರೆಯಬೇಡಿ" ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಹರೇಕಳ ಗ್ರಾಮದ ಗ್ರಾಮಪಂಚಾಯಿತಿ ಕಟ್ಟಡದಲ್ಲಿ ಹಾಜಬ್ಬರ ಚಿತ್ರ: ಅಕ್ಷರ ಸಂತನಿಗೆ ವಿಶೇಷ ಗೌರವ

ABOUT THE AUTHOR

...view details