ಬಂಟ್ವಾಳ:ಏ.18ರಂದು ಬಂಟ್ವಾಳದಲ್ಲಿ ನಡೆದ ಅಬಕಾರಿ ದಾಳಿ ಸಂದರ್ಭ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇಂದು ಬಂಧಿಸಲಾಗಿದೆ.
ಕಳ್ಳಭಟ್ಟಿ ಸಾರಾಯಿ ತಯಾರಿ ಪ್ರಕರಣ: ತಲೆಮರೆಸಿಕೊಂಡ ಆರೋಪಿ ಬಂಧನ - ಬಂಟ್ವಾಳ ಲೆಟೆಸ್ಟ್ ಕ್ರೈಂ ನ್ಯೂಸ್
ಬಂಟ್ವಾಳ ತಾಲೂಕಿನ ಕೊಡ್ಮಣ್ ಗ್ರಾಮದ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜು ಮುಂಭಾಗದಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇಂದು ಬಂಧಿಸಲಾಗಿದೆ.
ನೋಬರ್ಟ್ ಡಿಸೋಜ ಬಂಧಿತ ಆರೋಪಿ.
ನೋಬರ್ಟ್ ಡಿಸೋಜ (56) ಬಂಧಿತ ಆರೋಪಿ. ಬಂಟ್ವಾಳ ತಾಲೂಕಿನ ಕೊಡ್ಮಣ್ ಗ್ರಾಮದ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜು ಮುಂಭಾಗದಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನು ಇಂದು ಬಂಧಿಸಲಾಗಿದೆ.
ಅಬಕಾರಿ ಉಪನಿರೀಕ್ಷಕ ಜಗನ್ನಾಥ ನಾಯ್ಕ್, ಸಿಬ್ಬಂದಿ ಗಿರಿಧರ ಮಜಕರ್, ಗೋಪಾಲ ಗೌಡ ಮತ್ತು ಚಾಲಕ ಯೋಗೀಶ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.