ಮಂಗಳೂರು: ಬಾಲಿವುಡ್ ನಟಿ ಐಶ್ವರ್ಯ ರೈ ತನ್ನ ಚಿಕ್ಕಪ್ಪನ ಶ್ರಾದ್ದದಲ್ಲಿ ಪಾಲ್ಗೊಳ್ಳಲು ಪತಿ ಅಭಿಷೇಕ್ ಬಚ್ಚನ್ ಜೊತೆಗೆ ಮಂಗಳೂರಿಗೆ ಬಂದಿದ್ದಾರೆ.
ಕುಡ್ಲಕ್ಕೆ ಬಂದಿಳಿದ ಐಶ್ವರ್ಯ ರೈ... ಪತ್ನಿಗೆ ಅಭಿಷೇಕ್ ಬಚ್ಚನ್ ಸಾಥ್ - ಐಶ್ವರ್ಯ ರೈ
ಇಂದು ಮಂಗಳೂರಿನಲ್ಲಿ ನಡೆಯುವ ಐಶ್ವರ್ಯ ರೈಯವರ ಚಿಕ್ಕಪ್ಪನ ಶ್ರಾದ್ಧದಲ್ಲಿ ಭಾಗವಹಿಸಲು ಐಶ್ವರ್ಯ ರೈ , ಪತಿ ಬಾಲಿವುಡ್ ಸ್ಟಾರ್ ಅಭಿಷೇಕ್ ಬಚ್ಚನ್ ಜೊತೆಗೆ ಮಂಗಳೂರಿಗೆ ಆಗಮಿಸಿದ್ದಾರೆ.
ಐಶ್ವರ್ಯ ರೈ
ಮಂಗಳೂರು ಮೂಲದ ಐಶ್ವರ್ಯ ರೈ ಮುಂಬಯಿಯಲ್ಲಿ ನೆಲೆಸಿದ್ದು ಇತ್ತೀಚೆಗೆ ಅವರ ಚಿಕ್ಕಪ್ಪ ನಿಧನರಾಗಿದ್ದರು. ಇಂದು ಮಂಗಳೂರಿನಲ್ಲಿ ನಡೆಯುವ ಶ್ರಾದ್ದದಲ್ಲಿ ಭಾಗವಹಿಸಲು ಐಶ್ವರ್ಯ ರೈ , ಪತಿ ಬಾಲಿವುಡ್ ಸ್ಟಾರ್ ಅಭಿಷೇಕ್ ಬಚ್ಚನ್ ಜೊತೆಗೆ ಮಂಗಳೂರಿಗೆ ಆಗಮಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರನ್ನು ಕುಟುಂಬಸ್ಥರು ಸ್ವಾಗತಿಸಿ ಶ್ರಾದ್ದಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಮಗಳು ಆರಾಧ್ಯ ಜೊತೆಗಿರಲಿಲ್ಲ.