ಕರ್ನಾಟಕ

karnataka

By

Published : Aug 25, 2019, 5:49 PM IST

ETV Bharat / state

ಸಮುದ್ರಕ್ಕಿಳಿಯುವ ಬೋಟ್​ಗಳಿಗೆ ಎಐಎಸ್​ ಟ್ರಾನ್ಸ್ ಫಂಡರ್​ ಯಂತ್ರ ಕಡ್ಡಾಯ

ಮೀನುಗಾರಿಕೆಗೆ ಸಮುದ್ರಕ್ಕೆ ತೆರಳುವ ಬೋಟ್​ಗಳು ಕೆಲವು ಬಾರಿ ಅಪಾಯಕ್ಕೆ ಸಿಲುಕಿಕೊಳ್ಳುತ್ತವೆ. ಇದರಿಂದ ಪಾರು ಮಾಡಲು ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಮೀನುಗಾರಿಕಾ ಇಲಾಖೆ ಕಡ್ಡಾಯವಾಗಿ ಎಐಎಸ್​ ಟ್ರಾನ್ಸ್ ಫಂಡರ್​ ಯಂತ್ರವನ್ನು ಅಳವಡಿಸಲು ಆದೇಶಿಸಿದೆ ಎಂದು ಇಲಾಖೆ ಉಪನಿರ್ದೇಶಕ ತಿಪ್ಪೇಸ್ವಾಮಿ ಹೇಳಿದರು

ಎಐಎಸ್​ ಟ್ರಾನ್ಸ್​ ಫಂಡರ್​​ ಯಂತ್ರ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸೂಚನೆ ನೀಡಿದ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ

ಮಂಗಳೂರು: ಮೀನುಗಾರಿಕೆಗೆ ಸಮುದ್ರಕ್ಕೆ ತೆರಳುವ ಪ್ರತಿಯೊಂದು ಬೋಟ್​ಗೂ ಕಡ್ಡಾಯವಾಗಿ ಎಐಎಸ್​ ಟ್ರಾನ್ಸ್ ಫಂಡರ್​ ಯಂತ್ರವನ್ನು ಅಳವಡಿಸಲು ಮೀನುಗಾರಿಕಾ ಇಲಾಖೆ ಕಡ್ಡಾಯಗೊಳಿಸಿದೆ ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ ಹೇಳಿದರು.

ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ

ಮೀನಿಗಾರಿಕೆಗೆ ತೆರಳಿದಾಗ ಬೋಟ್​ಗಳು ಸಮುದ್ರದಲ್ಲಿ ಕೆಲವು ಬಾರಿ ಅಪಾಯಕ್ಕೆ ಸಿಲುಕಿಕೊಳ್ಳುತ್ತದೆ. ಮೀನುಗಾರರ ಪ್ರಾಣ ಹಾನಿ ಜೊತೆಗೆ ಬೋಟ್​ಗಳು ಸಮುದ್ರದ ಪಾಲಾಗುತ್ತವೆ. ಇಂತಹ ಅಪಾಯಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಮೀನುಗಾರಿಕೆ ಇಲಾಖೆ ಈ ವರ್ಷದಿಂದ ಎಐಎಸ್ ಟ್ರಾನ್ಸ್ ಫಂಡರ್ ಯಂತ್ರವನ್ನು ಬೋಟ್​ಗಳಲ್ಲಿ ಅಳವಡಿಸುವುದು ಕಡ್ಡಾಯಗೊಳಿಸಿದೆ ಎಂದರು.

ಕೆಲವು ಭಾರಿ ತಾಂತ್ರಿಕ ಸಮಸ್ಯೆ ಎದುರಾಗುತ್ತದೆ. ಇಂತಹ ಸಮಯದಲ್ಲಿ ಏನು ಮಾಡುವುದು ಎಂದು ಮೀನುಗಾರರಿಗೆ ತಿಳಿಯದಂತಾಗುತ್ತದೆ. ಬೋಟ್​ಗಳು ಎಲ್ಲಿ ಹೋಗಿವೆ ಎಂಬ ಮಾಹಿತಿಯು ತಿಳಿಯುವುದಿಲ್ಲ. ಈ ಟ್ರಾನ್ಸ್ ಫಂಡರ್ ಅಳವಡಿಕೆಯಿಂದ ಬೋಟ್​ಗಳು ಪತ್ತೆ ಸಾಧ್ಯ ಎಂದರು.

ಇದು ಬೋಟ್​ ಇರುವ ನಿಖರ ಮಾಹಿತಿ ನೀಡುತ್ತದೆ. ಕೋಸ್ಟಲ್ ಗಾರ್ಡ್​ನವರ ಕಂಟ್ರೋಲ್‌ ರೂಂಗೆ ಎಲ್ಲ ಮಾಹಿತಿ ಲಭ್ಯವಾಗುತ್ತದೆ. ಮಲ್ಪೆಯ ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾದ ಬಳಿಕ ಪತ್ತೆ ಹಚ್ಚಲು ಸಾಕಷ್ಟು ಶ್ರಮ ಪಡಬೇಕಾಯಿತು. ಪ್ರತಿ ಬೋಟ್​ಗಳಿಗೆ ಡೀಸೆಲ್ ಪಾಸ್​ಬುಕ್​ನ್ನು ಮೀನುಗಾರಿಕೆ ಇಲಾಖೆ ನೀಡಬೇಕಾಗುತ್ತೆ. ಎಐಎಸ್​ ಟ್ರಾನ್ಸ್​ ಫಂಡರ್​ ಯಂತ್ರ ಅಳವಡಿಸಿ ಬಿಲ್ ತೋರಿಸಿದವರಿಗೆ ಮಾತ್ರ ಪಾಸ್​ಬುಕ್ ನೀಡುತ್ತಿದ್ದೇವೆ. ಹಾಗಾಗಿ ಹೆಚ್ಚಿನ ಬೋಟ್​ಗಳು ಈ ಯಂತ್ರವನ್ನು ಅಳವಡಿಸಿವೆ ಎಂದು ಇಲಾಖೆ ತಿಳಿಸಿದೆ.

ABOUT THE AUTHOR

...view details