ಮಂಗಳೂರು:ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಏರಿಯಾದಲ್ಲಿ ದೊರೆತ ಚಿನ್ನದ ಬಳೆ ಹಿಂದಿರುಗಿಸುವ ಮೂಲಕ ಅಲ್ಲಿನ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿರುವ ಘಟನೆ ನಡೆದಿದೆ.
ವಿಮಾನ ನಿಲ್ದಾಣದಲ್ಲಿ ಟ್ರಾಲಿ ರಿಟ್ರಿವರ್ ಆಗಿರುವ ಡೊಂಬಯ್ಯ ಪೂಜಾರಿ ಅವರಿಗೆ ಪಾರ್ಕಿಂಗ್ ಸ್ಥಳದಲ್ಲಿ ಚಿನ್ನದ ಬಳೆಯೊಂದು ದೊರಕಿತ್ತು. ಆತ ಕೂಡಲೇ ಬಳೆಯನ್ನು ವಿಮಾನ ನಿಲ್ದಾಣದ ಲಾಸ್ಟ್ & ಫೌಂಡ್ ಚೇಂಬರ್‌ಗೆ ನೀಡಿದ್ದರು.
ಡೊಂಬಯ್ಯ ಪೂಜಾರಿ ಅವರ ಪ್ರಾಮಾಣಿಕತೆ ಮತ್ತು ಸಮಗ್ರತೆಯನ್ನು ನಾವು ಅಭಿನಂದಿಸುತ್ತೇವೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದೆ.
ಡೊಂಬಯ್ಯ ಪೂಜಾರಿ ಅವರು ಮಂಗಳೂರು ತಾಲೂಕಿನ ಅದ್ಯಪಾಡಿ ಪದವಿನ ನಿವಾಸಿಯಾಗಿದ್ದು, ಅನೇಕ ವರ್ಷಗಳಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಓದಿ: Gangrape ಪ್ರಕರಣಕ್ಕೆ ಸಂಬಂಧಿಸಿದಂತೆ ತಾಂತ್ರಿಕ, ವೈಜ್ಞಾನಿಕ ಸಾಕ್ಷ್ಯಗಳು ಸಾಕಷ್ಟಿವೆ: ಡಿಜಿಪಿ ಪ್ರವೀಣ್ ಸೂದ್