ಬಂಟ್ವಾಳ (ದಕ್ಷಿಣ ಕನ್ನಡ): ಅಜಿಲಮೊಗರುವಿನ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಸಂಘಟನೆಯ ಸದಸ್ಯರು ಹಡೀಲು ಬಿದ್ದ ಗದ್ದೆ ವ್ಯವಸಾಯ ಮಾಡುವ ಮೂಲಕ ಬಡಜನರಿಗೆ ನೆರವು ನೀಡಲು ಮುಂದಾಗಿದ್ದಾರೆ.
ವಿಎಚ್ಪಿ, ಬಜರಂಗದಳ ಸದಸ್ಯರಿಂದ ಹಡೀಲು ಬಿದ್ದ ಗದ್ದೆ ವ್ಯವಸಾಯ - dakshina kannada news
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜಿಲಮೊಗರುವಿನ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಸಂಘಟನೆಯ ಸದಸ್ಯರು ಹಡೀಲು ಬಿದ್ದ ಗದ್ದೆ ವ್ಯವಸಾಯ ಮಾಡುವ ಮೂಲಕ ಬಡ ಜನರ ನೆರವಿಗೆ ಮುಂದಾಗಿದ್ದಾರೆ.
ವಿಶ್ವ ಹಿಂದು ಪರಿಷತ್, ಬಜರಂಗದಳ ಸದಸ್ಯರಿಂದ ಹಡೀಲು ಬಿದ್ದ ಗದ್ದೆ ವ್ಯವಸಾಯ
ಹಲವಾರು ವರ್ಷಗಳಿಂದ ಹಡೀಲು ಬಿದ್ದಿರುವ ಸರಪಾಡಿಯ ಗದ್ದೆಯನ್ನು ಮಾಲೀಕರಿಂದ ಉಚಿತವಾಗಿ ಪಡೆದು ಭತ್ತ ನಾಟಿ ಮಾಡುತ್ತಿದ್ದಾರೆ. ಇದರಿಂದ ಬಂದ ಫಸಲನ್ನು ಬಡವರ್ಗದ ಜನರಿಗೆ ನೀಡುವ ಉದ್ದೇಶ ಸಂಘಟನೆಯದ್ದಾಗಿದೆ.
ಈ ಗದ್ದೆಯಲ್ಲಿ ಬರುವ ಅಕ್ಕಿಯನ್ನು ಕಡುಬಡವರಿಗೆ ಹಾಗೂ ಹುಲ್ಲನ್ನು ಗೋಶಾಲೆಗೆ ನೀಡಲು ತೀರ್ಮಾನಿಸಲಾಗಿದೆ.