ಮಂಗಳೂರು :ದ.ಕ ಜಿಲ್ಲೆಯಲ್ಲಿ ಕಠಿಣ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದೆ. ಅನಗತ್ಯ ಓಡಾಟ ನಡೆಸುವ ವಾಹನಗಳನ್ನು ಸೀಸ್ ಮಾಡಲಾಗುತ್ತದೆ ಎಂದು ಮಂಗಳೂರು ನಗರ ಉಪ ಪೊಲೀಸ್ ಆಯುಕ್ತ ಹರಿರಾಂ ಶಂಕರ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ; ವಾರಾಂತ್ಯದ ಕರ್ಫ್ಯೂ ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಅಧಿಕಾರಿಗಳಿಗೆ ಸೂಚನೆ
ಆದರೆ, ಮೆಡಿಕಲ್, ಹಾಲಿನ ಬೂತ್, ಸರ್ಕಾರಿ ಸಂಸ್ಥೆಗಳಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ಯಾವುದೇ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅವಕಾಶವಿಲ್ಲ. ಆದ್ದರಿಂದ ಅನಗತ್ಯ ತಿರುಗಾಟ ಮಾಡುವವರ ವಾಹನಗಳನ್ನು ಮುಟ್ಟುಗೋಲು ಹಾಕಲು ಪೊಲೀಸ್ ಅಧಿಕಾರಿಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಯಾವುದೇ ರೀತಿಯ ವಾದಕ್ಕೂ ಅವಕಾಶವಿಲ್ಲ ಎಂದು ಡಿಸಿಪಿ ಸೂಚನೆ ನೀಡಿದ್ದಾರೆ.
ವಾರಾಂತ್ಯ ಲಾಕ್‌ಡೌನ್ ಕುರಿತಂತೆ ನಗರ ಉಪ ಪೊಲೀಸ್ ಆಯುಕ್ತ ಹರಿರಾಂ ಶಂಕರ್ ಮಾಹಿತಿ.. ಕಟ್ಟಡ ಕಾಮಗಾರಿ ಕೆಲಸಗಾರರೂ, ತಮ್ಮ ವ್ಯಾಪ್ತಿಯಲ್ಲಿರುವ ಕಾಮಗಾರಿ ನಡೆಸಲು ಅವಕಾಶವಿದೆಯೇ ಹೊರತು, ಅದಕ್ಕಾಗಿ ಬೇರೆಡೆ ತೆರಳಲು ಅವಕಾಶವಿಲ್ಲ. ಹೋಟೆಲ್ ಪಾರ್ಸೆಲ್ ಕೂಡಾ ಸ್ವಿಗ್ಗಿ, ಝೊಮ್ಯಾಟೊದಂತಹ ಡೆಲಿವರಿ ಬಾಯ್ಸ್ಗಳಷ್ಟೇ ಕೊಂಡೊಯ್ಯಲು ಅವಕಾಶವಿದೆ. ಹೋಟೆಲ್ಗೆ ಬಂದು ಪಾರ್ಸೆಲ್ ಕೊಂಡೊಯ್ಯಲು ಯಾರಿಗೂ ಅವಕಾಶವಿಲ್ಲ.
ಎಲ್ಲಾ ಒಳದಾರಿಗಳನ್ನು ಬಂದ್ ಮಾಡಿ, ಎಲ್ಲಾ ವಾಹನಗಳು ಚೆಕ್ ಪೋಸ್ಟ್ ಮೂಲಕವೇ ಹೋಗಲು ಅನುವು ಮಾಡಲಾಗಿದೆ. ಈ ಮೂಲಕ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಲಾಗುತ್ತದೆ ಎಂದು ಹರಿರಾಂ ಶಂಕರ್ ಹೇಳಿದರು.