ಬಂಟ್ವಾಳ (ದಕ್ಷಿಣಕನ್ನಡ): ಕೆಲ ತಿಂಗಳ ಹಿಂದಷ್ಟೇ ಬಿ.ಸಿ.ರೋಡಿನಲ್ಲಿ ವೇಶ್ಯಾವಾಟಿಕೆ ಪ್ರಕರಣ ಪತ್ತೆಯಾದ ಘಟನೆಯ ನೆನಪು ಮಾಸುವ ಮುನ್ನವೇ ಬಂಟ್ವಾಳದಲ್ಲಿ ಮತ್ತೆ ವೇಶ್ಯಾವಾಟಿಕೆ ಪ್ರಕರಣವೊಂದು ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಮಂಡಾಡಿ ಎಂಬಲ್ಲಿ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಮೂಡುನಡುಗೋಡು ನಿವಾಸಿ ಸತೀಶ್ ಕುಮಾರ್ (36) ಎಂಬಾತನನ್ನು ನಗರ ಠಾಣಾ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ. ಈ ಸಂದರ್ಭ ಅಲ್ಲಿದ್ದ ಇಬ್ಬರು ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದಾರೆ.