ಕರ್ನಾಟಕ

karnataka

ETV Bharat / state

ಬೆಳೆಗಳಿಗೆ ಆಫ್ರಿಕನ್‌ ಬಸವನಹುಳು ಕಾಟ.. ಆತಂಕದಲ್ಲಿ ಕೃಷಿಕರು - ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮ ಪಂಚಾಯತ್

ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲೇಜಿ ಹಾಗೂ ಸುತ್ತಮುತ್ತ ಸುಮಾರು 75ಕ್ಕಿಂತಲೂ ಅಧಿಕ ಕೃಷಿಕರ ತೋಟಗಳಲ್ಲಿ ಬಸವನಹುಳುಗಳು ಬೆಳೆನಾಶ ಮಾಡುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

African snail destroying  Crop in belthangadi
ಬೆಳೆಗಳಿಗೆ ಆಫ್ರಿಕನ್‌ ಬಸವನಹುಳು ಕಾಟ..ಆತಂಕದಲ್ಲಿ ಕೃಷಿಕರು

By

Published : Aug 13, 2020, 11:16 PM IST

ಬೆಳ್ತಂಗಡಿ: ಕಾಡು ಪ್ರಾಣಿಗಳ ಕಾಟ, ಕೊಳೆರೋಗ, ಭತ್ತದ ಬೆಳೆಗೆ ನುಸಿಗಳ ಕಾಟ, ಬೆಲೆ ಕುಸಿತ ಸೇರಿದಂತೆ ವಿವಿಧ ಸಮಸ್ಯೆಯಿಂದ ಕಂಗೆಟ್ಟಿರುವ ಕೃಷಿಕರಿಗೆ, ಇದೀಗ ಹೊಸದೊಂದು ಸಮಸ್ಯೆ ಸೇರ್ಪಡೆಯಾಗಿದೆ.

ಬೆಳೆಗಳಿಗೆ ಆಫ್ರಿಕನ್‌ ಬಸವನಹುಳು ಕಾಟ..ಆತಂಕದಲ್ಲಿ ಕೃಷಿಕರು

ಆಫ್ರಿಕನ್‌ ಬಸವನ ಹುಳು ಎಂಬ ಹುಳು ಬೆಳೆಗಳ ಮೇಲೆ ದಾಳಿ ನಡೆಸುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲೇಜಿ ಹಾಗೂ ಸುತ್ತಮುತ್ತ ಸುಮಾರು 75ಕ್ಕಿಂತಲೂ ಅಧಿಕ ಕೃಷಿಕರ ತೋಟಗಳಲ್ಲಿ ಬಸವನಹುಳುಗಳು ಬೆಳೆನಾಶ ಮಾಡುತ್ತಿವೆ. ಈ ಹುಳಗಳು ಅಡಿಕೆ ಮರದ ಮೇಲೆ ಹೋಗಿ ಹಿಂಗಾರ, ತೋಟದಲ್ಲಿರುವ ಇನ್ನಿತರ ಬೆಳೆಗಳು, ತರಕಾರಿ ಹಾಗೂ ಹಲವು ಬಗೆಯ ಸಸ್ಯಗಳ ಎಲೆಗಳನ್ನು ತಿನ್ನುತ್ತಿವೆ.

ದೊಡ್ಡ-ದೊಡ್ಡ ಗಾತ್ರಗಳಲ್ಲಿ ಕಾಣಿಸಿಕೊಳ್ಳುವ ಈ ಹುಳುಗಳು, ಹಗಲಿನಲ್ಲಿ ತೋಟದಲ್ಲಿರುವ ಅಡಿಕೆ ಹಾಳೆಯಲ್ಲಿ, ಮರದಲ್ಲಿ ಹಾಗೂ ಪೊದೆಗಳಲ್ಲಿ ಅವಿತುಕೊಂಡಿರುವುದರಿಂದ ಅಷ್ಟಾಗಿ ಕಾಣಿಸಿಕೊಳ್ಳದೆ ರಾತ್ರಿಯಾದ ಕೂಡಲೇ ಆಹಾರ ಹುಡುಕಿಕೊಂಡು ಬರುತ್ತವೆ. ಮಳೆಗಾಲದಲ್ಲಿ ಅಥವಾ ತೇವಾಂಶ ಇರುವ ಕಡೆ ಇವು ಹೆಚ್ಚಾಗಿ ಕಾಣಸಿಗುತ್ತವೆ. ಇವು 500ಕ್ಕೂ ಹೆಚ್ಚು ಸಸ್ಯ ಪ್ರಭೇದಗಳನ್ನು ತಿನ್ನುತ್ತವೆ. ಬಸವನ ಹುಳು ಗಂಟೆಗೆ 2 ಮೀಟರ್ ವೇಗದಲ್ಲಿ ಇದು ಚಲಿಸುತ್ತವೆ. ಇವುಗಳ ಜೀವಿತಾವಧಿ 12 ವರ್ಷವಾಗಿದ್ದು, ಏಕಕಾಲದಲ್ಲಿ 100 ರಿಂದ 400 ಮೊಟ್ಟೆಗಳನ್ನು ಇಡುವ ಸಾಮರ್ಥ್ಯ ಹೊಂದಿವೆ.

ಈಗಾಗಲೇ ಮಂಗಗಳು ಹಾಗೂ ಇನ್ನಿತರ ಕಾಡು ಪ್ರಾಣಿಗಳ ಹಾವಳಿಯಿಂದ ಕಂಗೆಟ್ಟ ಕೃಷಿಕರಿಗೆ, ಬಸವನ ಹುಳುಗಳ ಬಾಧೆಯಿಂದ ನಿದ್ದೆ ಇಲ್ಲದಂತಾಗಿದೆ. ಅದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಬಸವನ ಹುಳು ನಿರ್ಮೂಲನೆಯ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಮನವಿ ಮಾಡಿದ್ದಾರೆ.

ABOUT THE AUTHOR

...view details