ಕರ್ನಾಟಕ

karnataka

By

Published : Aug 25, 2021, 8:03 PM IST

ETV Bharat / state

ಮಂಗಳೂರು ವಿವಿಗೆ ಅಫ್ಘಾನಿಸ್ತಾನ ವಿದ್ಯಾರ್ಥಿಗಳಿಂದ ದಾಖಲೆಯ ಅರ್ಜಿ ಸಲ್ಲಿಕೆ

ಈಗಾಗಲೇ 2021-22ನೇ ವರ್ಷಕ್ಕೆ ಪ್ರವೇಶಾತಿ ಆರಂಭವಾಗಿದೆ. ಅಫ್ಘನ್​ನ ವಿದ್ಯಾರ್ಥಿಗಳಿಂದ ದಾಖಲೆಯ ಅರ್ಜಿ ಸಲ್ಲಿಕೆಯಾಗಿವೆ. 156 ಅಫ್ಘನ್ ವಿದ್ಯಾರ್ಥಿಗಳ ಅಡ್ಮಿಷನ್ ಪೂರ್ಣಗೊಂಡಿದೆ‌. ಇವರಲ್ಲಿ‌ 36 ವಿದ್ಯಾರ್ಥಿಗಳು ಯುಜಿಗೆ, 111 ವಿದ್ಯಾರ್ಥಿಗಳು ಪಿಜಿಗೆ, 14 ವಿದ್ಯಾರ್ಥಿಗಳು ಪಿಹೆಚ್​ಡಿಗೆ ದಾಖಲಾಗಿದ್ದಾರೆ.ಉನ್ನತ ವ್ಯಾಸಂಗ ಮಾಡುವವರು ಆನ್ಲೈನ್ ಮೂಲಕವೇ ಭಾರತದ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಬೇಕು. ಅಡ್ಮಿಷನ್ ಆಗಬೇಕಿದ್ದರೆ ಪಾಸ್​ಪೋರ್ಟ್ ಹಾಗೂ ವೀಸಾ ತಪಾಸಣೆ ನಡೆಸಿ ಹೆಚ್ಎಂಆರ್​ಡಿ ಅನುಮತಿಯೂ ದೊರಕಬೇಕು..

ಮಂಗಳೂರು ವಿವಿ
ಮಂಗಳೂರು ವಿವಿ

ಮಂಗಳೂರು :ಅಫ್ಘನ್​, ತಾಲಿಬಾನ್​​ ಕೈವಶವಾಗಿರುವ ಹಿನ್ನೆಲೆ ಹೆಚ್ಚಿನ ಜನರು ದೇಶ ತೊರೆಯುತ್ತಿದ್ದಾರೆ. ಹೀಗಾಗಿ, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡುವ ಉದ್ದೇಶದಿಂದ ಹಿಂದೆಂದಿಗಿಂತಲೂ ಹೆಚ್ಚು ಅಫ್ಘಾನಿಸ್ತಾನದ ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ.

ಮಂಗಳೂರು ವಿವಿಗೆ ಅಫ್ಘಾನಿಸ್ತಾನದ ವಿದ್ಯಾರ್ಥಿಗಳಿಂದ ದಾಖಲೆಯ ಅರ್ಜಿ ಸಲ್ಲಿಕೆ

ಇದೇ ಮೊದಲ ಬಾರಿಗೆ ಯುಜಿ, ಪಿಜಿ, ಪಿಹೆಚ್​ಡಿ ವ್ಯಾಸಂಗ ಮಾಡಲು 156 ಅಫ್ಘನ್​ ವಿದ್ಯಾರ್ಥಿಗಳ ದಾಖಲಾತಿ ಪೂರ್ಣಗೊಂಡಿದೆ ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ. 2014 ರಿಂದ ಮಂಗಳೂರು ವಿವಿಯಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ದೊರಕಿದೆ. ಆ ಸಮಯದಲ್ಲಿ ವಿವಿಧ ದೇಶಗಳ 16 ವಿದ್ಯಾರ್ಥಿಗಳು ವಿವಿಯಲ್ಲಿ ವ್ಯಾಸಂಗ ಮಾಡಿದ್ದರು.

ಅದರ ಮರು ವರ್ಷವೇ ಮೊದಲ ಬಾರಿಗೆ ಅಫ್ಘಾನಿಸ್ತಾನದ ವಿದ್ಯಾರ್ಥಿಗಳು ಮಂಗಳೂರು ವಿವಿಗೆ ಪ್ರವೇಶ ಪಡೆದಿದ್ದರು. ಸದ್ಯ 38 ವಿವಿಧ ದೇಶಗಳ 180 ವಿದ್ಯಾರ್ಥಿಗಳು ಮಂಗಳೂರು ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ 53 ಮಂದಿ ಅಫ್ಘನ್ ವಿದ್ಯಾರ್ಥಿಗಳಿದ್ದಾರೆ.

ಈಗಾಗಲೇ 2021-22ನೇ ವರ್ಷಕ್ಕೆ ಪ್ರವೇಶಾತಿ ಆರಂಭವಾಗಿದೆ. ಅಫ್ಘನ್​ನ ವಿದ್ಯಾರ್ಥಿಗಳಿಂದ ದಾಖಲೆಯ ಅರ್ಜಿ ಸಲ್ಲಿಕೆಯಾಗಿವೆ. 156 ಅಫ್ಘನ್ ವಿದ್ಯಾರ್ಥಿಗಳ ಅಡ್ಮಿಷನ್ ಪೂರ್ಣಗೊಂಡಿದೆ‌. ಇವರಲ್ಲಿ‌ 36 ವಿದ್ಯಾರ್ಥಿಗಳು ಯುಜಿಗೆ, 111 ವಿದ್ಯಾರ್ಥಿಗಳು ಪಿಜಿಗೆ, 14 ವಿದ್ಯಾರ್ಥಿಗಳು ಪಿಹೆಚ್​ಡಿಗೆ ದಾಖಲಾಗಿದ್ದಾರೆ.

ಉನ್ನತ ವ್ಯಾಸಂಗ ಮಾಡುವವರು ಆನ್ಲೈನ್ ಮೂಲಕವೇ ಭಾರತದ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಬೇಕು. ಅಡ್ಮಿಷನ್ ಆಗಬೇಕಿದ್ದರೆ ಪಾಸ್​ಪೋರ್ಟ್ ಹಾಗೂ ವೀಸಾ ತಪಾಸಣೆ ನಡೆಸಿ ಹೆಚ್ಎಂಆರ್​ಡಿ ಅನುಮತಿಯೂ ದೊರಕಬೇಕು. ವಿದ್ಯಾರ್ಥಿಗಳ ದಾಖಲೆಗಳು ಸರಿಯಿದ್ದು, ಅವರು ಮಂಗಳೂರು ವಿವಿಯನ್ನು ಆಯ್ಕೆ ಮಾಡಿದಲ್ಲಿ, ಕೇಂದ್ರ ಸರ್ಕಾರದ ಏಜೆನ್ಸಿಯಿಂದ ಲಿಖಿತ ರೂಪದಲ್ಲಿ ಪತ್ರ ಬರುತ್ತದೆ. ಅದನ್ನು ನಾವು ಪರಿಶೀಲನೆ ನಡೆಸಿ ಅವರ ಅಡ್ಮಿಷನ್ ಮಾಡುತ್ತೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಅಫ್ಘನ್​ನಿಂದ ಜನರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಆಗಸ್ಟ್ 31ರೊಳಗೆ ಮುಗಿಯಲಿದೆ : ಬ್ರಿಟನ್

ಹೀಗೆ ವ್ಯಾಸಂಗಕ್ಕೆ ಬಂದಿರುವ ಅಫ್ಘನ್​ನ ವಿದ್ಯಾರ್ಥಿಗಳಲ್ಲಿ ವಿವಾಹಿತರು, ವಿದ್ಯಾರ್ಥಿನಿಯರೂ ಇದ್ದಾರೆ. ಪ್ರಸಕ್ತ ವ್ಯಾಸಂಗ ಮಾಡುತ್ತಿರುವ 53 ವಿದ್ಯಾರ್ಥಿಗಳ ಪೈಕಿ 10 ವಿದ್ಯಾರ್ಥಿನಿಯರಿದ್ದಾರೆ. ವಿವಾಹಿತರ ಪತ್ನಿ/ಪತಿ, ಕುಟುಂಬವೆಲ್ಲಾ ಅಫ್ಘಾನಿಸ್ತಾನದಲ್ಲಿಯೇ ಇದ್ದಾರೆ. ಇವರು ತುರ್ತು ಸಂದರ್ಭ ಹೊರತು ಪಡಿಸಿ, ವ್ಯಾಸಂಗ ಪೂರ್ಣಗೊಳ್ಳುವವರೆಗೆ ದೇಶಕ್ಕೆ ಮರಳುವಂತಿಲ್ಲ. ಸದ್ಯ ಅಫ್ಘನ್​ನಲ್ಲಿರುವ ಪರಿಸ್ಥಿತಿಯಿಂದ ಇಲ್ಲಿರುವ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ABOUT THE AUTHOR

...view details