ಮಂಗಳೂರು: ಪೊಲೀಸರು ರಾಜಕೀಯ ಪಕ್ಷಕ್ಕೆ ಅಡ್ಜಸ್ಟ್ಮೆಂಟ್ ಮಾಡುತ್ತಿದ್ದು ಕಾನೂನು ಕಾಪಾಡಲು ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ಜೆ ಆರ್ ಲೋಬೋ ಟೀಕಿಸಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಪೊಲೀಸರು ತಮ್ಮ ಕಾರ್ಯವೈಖರಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಸಮಾಜದಲ್ಲಿ ದ್ವೇಷ ಭಾಷಣಗಳನ್ನು ತಡೆಯಲು ವಿಫಲರಾಗಿದ್ದು ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತಿದೆ. ಕಾಣಿಯೂರಿನಲ್ಲಿ ವ್ಯಾಪಾರಕ್ಕೆಂದು ಹೋದವರ ಮೇಲೆ ಗುಂಪು ಹಲ್ಲೆ ನಡೆದಿರುವುದು ಇಂತಹದೇ ದ್ವೇಷ ಭಾಷಣಗಳಿಂದ ಎಂದು ದೂರಿದರು.