ಕರ್ನಾಟಕ

karnataka

ETV Bharat / state

ಬಾಂಬ್​ ಪ್ರಕರಣ: ಆದಿತ್ಯರಾವ್​ನನ್ನು ವಿಮಾನ ನಿಲ್ದಾಣಕ್ಕೆ ಕರೆತಂದು ಸನ್ನಿವೇಶ ಮರು ಸೃಷ್ಟಿ - ಬಾಂಬರ್​ ಅದಿತ್ಯ ರಾವ್​

ಮಂಗಳೂರಿನ ಪಣಂಬೂರು ಸಹಾಯಕ ಆಯುಕ್ತರ ಕಚೇರಿಯಿಂದ ವಿಚಾರಣೆ ಬಳಿಕ ಏರ್ ಪೋರ್ಟ್​ಗೆ ಬಿಗಿ ಪೊಲೀಸ್ ಬಂದೋಬಸ್ತ್​ನಲ್ಲಿ ಕರೆದುಕೊಂಡು ಬರಲಾಯಿತು.ಈ ವೇಳೆ ಆದಿತ್ಯ ರಾವ್​ ಬಾಂಬ್​ ಇರಿಸಿದ್ದ ಸ್ಥಳವನ್ನು ತೋರಿಸಿದ್ದಾನೆ.

ಆದಿತ್ಯರಾವ್,  Aditya Rao
ಆದಿತ್ಯರಾವ್

By

Published : Jan 24, 2020, 1:24 PM IST

Updated : Jan 24, 2020, 1:29 PM IST

ಮಂಗಳೂರು: ಪೊಲೀಸ್ ಕಸ್ಟಡಿಯಲ್ಲಿರುವ ಆದಿತ್ಯರಾವ್​ನನ್ನು ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಯಿತು.

ಮಂಗಳೂರು ಏರ್ ಪೋರ್ಟ್​ನಲ್ಲಿ ಬಾಂಬ್ ಇರಿಸಿ ಹೋದ ಸ್ಥಳಕ್ಕೆ ಕರೆದುಕೊಂಡು ಬಂದ ಪೊಲೀಸರು, ಸ್ಥಳ ಮಹಜರು ನಡೆಸಿದರು. ಮಂಗಳೂರಿನ ಪಣಂಬೂರು ಸಹಾಯಕ ಆಯುಕ್ತರ ಕಚೇರಿಯಿಂದ ವಿಚಾರಣೆ ಬಳಿಕ ಏರ್ ಪೋರ್ಟ್​ಗೆ ಬಿಗಿ ಪೊಲೀಸ್ ಬಂದೋಬಸ್ತ್​ನಲ್ಲಿ ಕರೆದುಕೊಂಡು ಬರಲಾಯಿತು.

ಆದಿತ್ಯರಾವ್

ಅದಿತ್ಯ ರಾವ್​, ಬಾಂಬ್ ಇರಿಸಿದ ಸ್ಥಳವನ್ನು ಪೊಲೀಸರಿಗೆ ತೋರಿಸಿದ್ದಾನೆ. ವಿಮಾನ ನಿಲ್ದಾಣಕ್ಕೆ ಹೇಗೆ ಬಂದದ್ದು, ಬಾಂಬ್ ಬ್ಯಾಗನ್ನು ಇರಿಸಿದ ಸ್ಥಳ ಮತ್ತು ಎಸ್ಕಲೇಟರ್​ನಲ್ಲಿ ಇಳಿದು ಹೋದ ಜಾಗ, ಪಾರ್ಕಿಂಗ್ ಪ್ರದೇಶದಲ್ಲಿ ನಡೆದುಕೊಂಡು ಹೋಗಿ ರಿಕ್ಷಾ ಹತ್ತಿ ಹೋದ ಜಾಗವನ್ನು ತೋರಿಸಿದ್ದಾನೆ.

Last Updated : Jan 24, 2020, 1:29 PM IST

ABOUT THE AUTHOR

...view details