ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಸಾಮಾಗ್ರಿ ಇರಿಸಿದ್ದ ಆರೋಪಿ ಆದಿತ್ಯ ರಾವ್ನ ಗುರುತು ಪತ್ತೆಗಾಗಿ ಇಂದು ಸಾಕ್ಷಿಗಳ ಮುಂದೆ ಜಿಲ್ಲಾ ಕಾರಾಗೃಹದಲ್ಲಿ ಪರೇಡ್ ನಡೆಸಲಾಯಿತು.
ಸಾಕ್ಷಿಗಳ ಮುಂದೆ ಬಾಂಬರ್ ಆದಿತ್ಯರಾವ್ ಪರೇಡ್ ಜಿಲ್ಲಾ ಕಾರಾಗೃಹದಲ್ಲಿ ಬಂಧಿತನಾಗಿರುವ ಆದಿತ್ಯ ರಾವ್ ನನ್ನು ಮಂಗಳೂರು ತಹಶಿಲ್ದಾರ್ ಗುರುಪ್ರಸಾದ್, ಅವರ ಸಿಬ್ಬಂದಿ ಹಾಗೂ ಜೈಲು ಅಧೀಕ್ಷಕರ ಸಮ್ಮುಖದಲ್ಲಿ ಸಾಕ್ಷಿಗಳ ಪರೇಡ್ ನಡೆಸಲಾಯಿತು.
ಪರೇಡ್ನ ವಿವರಗಳನ್ನು ಬಹಿರಂಗ ಪಡಿಸಲಾಗುವುದಿಲ್ಲ ಎಂದ ಮಂಗಳೂರು ತಹಶಿಲ್ದಾರ್ ಗುರುಪ್ರಸಾದ್, ಆ ಮಾಹಿತಿಯನ್ನು ಮುಚ್ಚಿದ ಲಕೋಟೆಯೊಳಗೆ ಹಾಕಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಎರಡು ವಾರಗಳ ಹಿಂದೆಯೇ ಆದಿತ್ಯ ರಾವ್ನ ಪರೇಡ್ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದರು. ಆದರೆ ಈ ಸಂದರ್ಭದಲ್ಲಿ ಆತನಿಗೆ ಆರೋಗ್ಯ ಸಮಸ್ಯೆ ತಲೆದೋರಿರುವುದರಿಂದ ಪರೇಡ್ ನಡೆಸುವುದನ್ನು ಮುಂದೂಡಲಾಗಿತ್ತು. ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಆತನನ್ನು ದಾಖಲಿಸಿ ಆತ ಗುಣಮುಖ ಆದ ಬಳಿಕ ಈಗ ಮತ್ತೆ ಈ ಪರೇಡ್ ನಡೆಸಲಾಯಿತು.