ಮಂಗಳೂರು:ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆರೋಪಿ ಆದಿತ್ಯ ರಾವ್ ಪೊಲೀಸ್ ಕಸ್ಟಡಿಯಲ್ಲಿದ್ದು, ಆತ ಕೆಲಸಕ್ಕಾಗಿ ನೀಡಿದ ಬಯೋ ಡೇಟಾ ಈಗ ಮಾಧ್ಯಮಗಳಿಗೆ ಲಭ್ಯವಾಗಿದೆ.
ಬಾಂಬರ್ ಆದಿತ್ಯ ರಾವ್ ನೀಡಿದ ಬಯೋಡೇಟಾದಲ್ಲೇನಿದೆ? ಹೈ ಕ್ವಾಲಿಪೈ ಆದ್ರೂ ನೀಡಿದ್ದು ಮಾತ್ರ...!!? - ಆದಿತ್ಯ ರಾವ್ ಬಯೋ ಡೇಟಾ ಪತ್ತೆ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪ್ರಕರಣದ ಆರೋಪಿ ಬಾಂಬರ್ ಆದಿತ್ಯ ರಾವ್ ಬಯೋಡೇಟಾವನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಬಾಂಬರ್ ಆದಿತ್ಯ ರಾವ್
ಕುಡ್ಲ ರೆಸ್ಟೋರೆಂಟ್ನಲ್ಲಿ ಬಿಲ್ಲಿಂಗ್ ಕೆಲಸಕ್ಕೆ ಬಂದಿದ್ದ ಆದಿತ್ಯರಾವ್ ಕೆಲಸಕ್ಕಾಗಿ ಬಯೋಡೇಟಾ ನೀಡಿದ್ದು, ಇದರಲ್ಲಿ ಧನಾತ್ಮಕವಾದ ಮನಸ್ಸು ಮತ್ತು ಸಾಧನೆಯ ಪ್ರಜ್ಞೆ ಉತ್ತಮ ಫಲಿತಾಂಶದತ್ತ ಕೊಂಡೊಯ್ಯುತ್ತದೆ ಎಂದು ಉಲ್ಲೇಖ ಮಾಡಿದ್ದಾನೆ. ಅಷ್ಟೇ ಅಲ್ಲದೆ ಬಿಇ, ಎಂಬಿಎ ವಿದ್ಯಾರ್ಹತೆ ಇದ್ದರೂ ಪಿಯುಸಿ ಎಂದು ಬರೆದುಕೊಂಡಿದ್ದಾನೆ.
ಈತ ಸಂಗೀತ, ಕರಾಟೆಯಲ್ಲಿ ಯೆಲ್ಲೋ ಬೆಲ್ಟ್ ಪಡೆದಿದ್ದು, ಎನ್ಸಿಸಿಯಲ್ಲಿಯೂ ಆಸಕ್ತಿ ಹೊಂದಿದ್ದಾನೆ. ಪ್ರಯಾಣ , ಕ್ರಿಕೆಟ್, ಮ್ಯೂಸಿಕ್, ಚರ್ಚೆ ಆಸಕ್ತಿಕರ ವಿಷಯ ಎಂದು ಬರೆದುಕೊಂಡಿದ್ದಾನೆ.