ಕರ್ನಾಟಕ

karnataka

ETV Bharat / state

ಬಜ್ಪೆ ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ಪಾರ್ಕಿಂಗ್ ಶುಲ್ಕ ವಸೂಲಿ ಆರೋಪ: ಸಿಬ್ಬಂದಿ ಅಮಾನತು - Additional parking fee at Bajpe Airport latest news

ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ಪಾರ್ಕಿಂಗ್​ ಶುಲ್ಕ ವಸೂಲಿ ಆರೋಪ ಕೇಳಿಬಂದಿದೆ. ಪ್ರಿಯಾಂಕಾ ಶಾನುಭಾಗ್​ ಎಂಬುವರಿಂದ 55 ರೂಪಾಯಿ ಪಾರ್ಕಿಂಗ್ ವಸೂಲಿ ಮಾಡಿದ ಗುತ್ತಿಗೆ ಸಿಬ್ಬಂದಿ 20 ರೂಪಾಯಿ ಶುಲ್ಕ ರಶೀದಿ ನೀಡಿದ್ದಾರೆ. ಈ ಬಗ್ಗೆ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ದೂರು ಕೊಟ್ಟಿದ್ದರಿಂದ ಆ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಬಜ್ಪೆ ವಿಮಾನ ನಿಲ್ದಾಣ

By

Published : Oct 22, 2019, 1:43 PM IST

ಮಂಗಳೂರು: ನಿಗದಿತ ಶುಲ್ಕಕ್ಕಿಂತ ಅಧಿಕ ಪಾರ್ಕಿಂಗ್ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಗುತ್ತಿಗೆದಾರ ಸಂಸ್ಥೆಯ ಸಿಬ್ಬಂದಿಯನ್ನು ಅಮಾನತು ಮಾಡಿದ ಘಟನೆ ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ನಡೆದಿದೆ.

ಬಜ್ಪೆ ವಿಮಾನ ನಿಲ್ದಾಣ

ಈ ಬಗ್ಗೆ ತನಿಖೆ ನಡೆಸಿ, ಹೆಚ್ಚುವರಿ ಪಾರ್ಕಿಂಗ್ ಶುಲ್ಕ ಪಡೆಯುತ್ತಿದ್ದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವಿ.ವಿ.ರಾವ್ ಅವರು ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕಾ ಶಾನುಭಾಗ್ ಅವರು ನೀಡಿದ್ದ ಶುಲ್ಕದ ವಿವಿರ

ಪ್ರಿಯಾಂಕಾ ಶಾನುಭಾಗ್ ಎಂಬುವರು ಅಕ್ಟೋಬರ್ 13ರಂದು ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್ ಮಾಡಿದ್ದಕ್ಕಾಗಿ ಪಾರ್ಕಿಂಗ್ ಗುತ್ತಿಗೆ ಸಂಸ್ಥೆಯ ಸಿಬ್ಬಂದಿ 55 ರೂಪಾಯಿ ಶುಲ್ಕ ಕೇಳಿದ್ದರು. ಈ ಬಗ್ಗೆ ರಶೀದಿ ನೀಡಲು ನಿರಾಕರಿಸಿದ ಸಿಬ್ಬಂದಿ ನಂತರ ಕೇವಲ 20 ರೂಪಾಯಿ ಪಾರ್ಕಿಂಗ್ ದರದ ರಶೀದಿ ನೀಡಿದ್ದರು ಎನ್ನಲಾಗ್ತಿದೆ.

ಈ ಬಗ್ಗೆ ಪ್ರಿಯಾಂಕಾ ಶಾನುಭಾಗ್ ಪಾರ್ಕಿಂಗ್ ಶುಲ್ಕ ವಸೂಲಿಯ ಮೂಲಕ ಸಾರ್ವಜನಿಕರಿಂದ ಲೂಟಿ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದರು. ಅಲ್ಲದೆ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರಿಗೂ ದೂರು ನೀಡಿದ್ದರು‌.

ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ತನಿಖಾ ತಂಡದ ಮೂಲಕ ತಕ್ಷಣ ತನಿಖೆ ನಡೆಸಿ ಅಧಿಕ ಪಾರ್ಕಿಂಗ್ ಶುಲ್ಕ ಪಡೆದುಕೊಳ್ಳುವುದು ಖಾತರಿಯಾಗಿರುವುದರಿಂದ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುವ ಗುತ್ತಿಗೆ ಸಂಸ್ಥೆಯ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

For All Latest Updates

ABOUT THE AUTHOR

...view details