ಕರ್ನಾಟಕ

karnataka

ETV Bharat / state

ದಸರಾ ಹಬ್ಬಕ್ಕೆ ಮಂಗಳೂರಲ್ಲಿ ಶಾಲೆಗಳಿಗೆ 4 ದಿನ ಹೆಚ್ಚುವರಿ ರಜೆ ಘೋಷಣೆ - additional holidays mangaluru schools

ದಸರಾ ಹಬ್ಬದ ಹಿನ್ನೆಲೆಯಲ್ಲಿ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ 4 ದಿನಗಳ ಹೆಚ್ಚುವರಿ ರಜೆ ನೀಡಲಾಗಿದೆ.

additional-holidays-for-mangaluru-schools-for-dasara
ದಸರಾ ಹಬ್ಬಕ್ಕೆ ಮಂಗಳೂರಲ್ಲಿ ಶಾಲೆಗಳಿಗೆ 4 ದಿನ ಹೆಚ್ಚುವರಿ ರಜೆ ಘೋಷಣೆ

By

Published : Sep 24, 2022, 9:11 AM IST

ಮಂಗಳೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ 4 ದಿನಗಳ ಹೆಚ್ಚುವರಿ ರಜೆ ಘೋಷಿಸಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಆದೇಶಿಸಿದ್ದಾರೆ.

ಸೆ.28ರಿಂದ ಅಕ್ಟೋಬರ್ 1ರವರೆಗೆ ಹೆಚ್ಚುವರಿ 4 ದಿನಗಳ ರಜೆ ನೀಡಲಾಗಿದೆ. ಈಗಾಗಲೇ ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಟೋಬರ್ 3ರಿಂದ 16ರವರೆಗೆ ದಸರಾ ರಜೆ ಘೋಷಿಸಲಾಗಿತ್ತು. ಆದರೆ ಸೆ.26ರಿಂದ ಆರಂಭಗೊಳ್ಳುವ ಮಂಗಳೂರು ದಸರಾ ಹಬ್ಬಕ್ಕೆ ಪೂರಕವಾಗುವಂತೆ ಸೆ.26ರಿಂದಲೇ ರಜೆ ನೀಡುವಂತೆ ಪೋಷಕರು, ಜನಪ್ರತಿನಿಧಿಗಳು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು ಹೆಚ್ಚುವರಿ ರಜೆ ನೀಡಲು ಸೂಚಿಸಿದ್ದರು.

ಈ ಸೂಚನೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಮಂಗಳೂರು ತಾಲೂಕು ವ್ಯಾಪ್ತಿಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸೆ.28ರಿಂದ ಅಕ್ಟೋಬರ್ 1ರವರೆಗೆ ಹೆಚ್ಚುವರಿ ರಜೆಗಳನ್ನು ಘೋಷಿಸಿದ್ದಾರೆ. ಅಕ್ಟೋಬರ್ 2ರ ಭಾನುವಾರ ಕಡ್ಡಾಯವಾಗಿ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಆಚರಿಸುವಂತೆ ಸೂಚಿಸಲಾಗಿದೆ.

ಆದೇಶ ಪ್ರತಿ

ವಿದ್ಯಾರ್ಥಿಗಳಿಗೆ ನೀಡಲಾಗಿರುವ ಈ ನಾಲ್ಕು ಹೆಚ್ಚುವರಿ ರಜೆಗಳನ್ನು ನವೆಂಬರ್ ತಿಂಗಳಿನ ನಾಲ್ಕು ಶನಿವಾರ ಪೂರ್ಣ ದಿನದ ತರಗತಿ ಮತ್ತು ಎರಡು ಭಾನುವಾರ ಪೂರ್ಣ ಶಾಲಾ ಕೆಲಸದ ದಿನಗಳಾಗಿ ನಡೆಸಿ ರಜೆಯನ್ನು ಸರಿದೂಗಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ಝಗಮಗಿಸುವ ವಿದ್ಯುತ್ ದೀಪಾಲಂಕಾರದಲ್ಲಿ ಹೆಜ್ಜೆ ಹಾಕಿದ ಗಜಪಡೆ

ABOUT THE AUTHOR

...view details