ಮಂಗಳೂರು: ಭಾರಿ ಹೋರಾಟದ ಬಳಿಕ ಸುರತ್ಕಲ್ ಎನ್‌ಐಟಿಕೆ ಟೋಲ್ ಗೇಟ್ ರದ್ದುಗೊಳಿಸಿ ಸಮೀಪದ ಟೋಲ್ಗೇಟ್ಗೆ ವಿಲೀನಗೊಳಿಸಲಾಗಿದ್ದು, ಡಿಸೆಂಬರ್ 1 ರಿಂದ ಹೆಜಮಾಡಿ ಟೋಲ್ಗೇಟ್ನಲ್ಲಿ ಹೆಚ್ಚುವರಿ ದರ ವಸೂಲಿ ಶುರುವಾಗಲಿದೆ.
ಸುರತ್ಕಲ್ ಎನ್‌ಐಟಿಕೆ ಟೋಲ್‌ಗೇಟ್ ಅನ್ನು ಹೆಜಮಾಡಿ ಟೋಲ್ ಜತೆ ವಿಲೀನಗೊಳಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿದೆ. ಈ ಸಂಬಂಧ ಉಡುಪಿ ಜಿಲ್ಲಾಡಳಿತಕ್ಕೆ ಪ್ರಾಧಿಕಾರ ಪತ್ರ ಬರೆದಿದೆ. ಡಿ.1ರಿಂದ ಅನ್ವಯವಾಗುವಂತೆ ಸುರತ್ಕಲ್ ಟೋಲ್ ವಿಲೀನಗೊಂಡಿದ್ದು, ಇದರಿಂದ ಹೆಜಮಾಡಿಯಲ್ಲಿ ಟೋಲ್ ದರ ದುಬಾರಿಯಾಗಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ಸುರತ್ಕಲ್ ಟೋಲ್ ರದ್ದು- ಕಟೀಲ್; ಹಣ ಸಂಗ್ರಹ ಸ್ಥಗಿತಗೊಳ್ಳುವವರೆಗೂ ಹೋರಾಟ-ಮುನೀರ್ ಕಾಟಿಪಳ್ಳ
ಟೋಲ್ ಸಂಗ್ರಹ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ತೊಡಕಾಗದಂತೆ ನೋಡಿಕೊಳ್ಳಬೇಕು. ಟೋಲ್ ವಿಲೀನದ ಬಳಿಕ ಸುಂಕ ದರ ಸಂಗ್ರಹದಲ್ಲಿ ವ್ಯತ್ಯಯ ಉಂಟಾದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜತೆಗಿನ ರಾಜ್ಯ ಸರ್ಕಾರದ ಒಪ್ಪಂದದಂತೆ ಸರ್ಕಾರವೇ ನಷ್ಟವನ್ನು ಭರಿಸಬೇಕು. ಉಡುಪಿ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಹಾಯ, ನೆರವು, ಪೊಲೀಸ್ ಭದ್ರತೆ ಒದಗಿಸಬೇಕು. ಜೊತೆಗೆ ಟೋಲ್ಗೇಟ್ನಲ್ಲಿ ಹೆಚ್ಚುವರಿ ದರ ವಸೂಲಿ ಡಿ.1ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ಪತ್ರದಲ್ಲಿ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಎಚ್.ಎಸ್. ಲಿಂಗೇಗೌಡ ತಿಳಿಸಿದ್ದಾರೆ.
ಇದನ್ನೂ ಓದಿ:ಬಹು ದಿನಗಳ ಹೋರಾಟದ ಬಳಿಕ ಸುರತ್ಕಲ್ ಟೋಲ್ ಗೇಟ್ ರದ್ದು: ನಳಿನ್ ಕುಮಾರ್ ಕಟೀಲ್ ಟ್ವೀಟ್