ಸುಬ್ರಹ್ಮಣ್ಯ:ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಟಗರು ಚಿತ್ರದ ನಾಯಕಿ ಮಾನ್ವಿತಾ ಭೇಟಿ ನೀಡಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು, ಪುನೀತ್ ರಾಜ್‌ಕುಮಾರ್ ಆತ್ಮಶಾಂತಿಗಾಗಿ ಪ್ರಾರ್ಥಿಸಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪುನಿತ್ ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ಸುಬ್ರಹ್ಮಣ್ಯ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಅಪ್ಪು ಇಲ್ಲದೆ ಕನ್ನಡ ಚಿತ್ರರಂಗ ಬಡವಾಗಿದೆ. ಅಪ್ಪು ಯಾವತ್ತೂ ನಮ್ಮ ಜೊತೆಗೇನೆ ಇರ್ತಾರೆ. ಕನ್ನಡ ಚಿತ್ರರಂಗದ ಎಲ್ಲರೂ ಅಪ್ಪು ಅವರನ್ನು ಮಿಸ್ ಮಾಡ್ತಾ ಇದ್ದೇವೆ ಎಂದು ಹೇಳಿದರು.
ಬಹಳಷ್ಟು ಜನರಿಗೆ ನಾನು ಕರಾವಳಿಯವಳು ಎಂದು ಈ ತನಕ ತಿಳಿದಿಲ್ಲ. ತುಳು ಚಿತ್ರದಲ್ಲಿಯೂ ನಟಿಸಲು ಸಿದ್ದನಿದ್ದೇನೆ. ಆದರೆ, ಒಳ್ಳೆಯ ಚಿತ್ರಕಥೆ ಬೇಕು. ತುಳು ಚಿತ್ರದ ಕುರಿತಾಗಿ ಯಾವುದೇ ಮಾತುಕತೆಗಳು ಇಲ್ಲಿವರೆಗೆ ನಡೆದಿಲ್ಲ ಎಂದರು.
ನನ್ನ ಮರಾಠಿ ಚಿತ್ರ ಸದ್ಯದಲ್ಲೇ ರಿಲೀಸ್ ಆಗುವ ಸಾಧ್ಯತೆಯಿದೆ. ಕೊರೊನಾ ಕಾರಣಕ್ಕಾಗಿ ಬಿಡುಗಡೆಯಲ್ಲಿ ಸ್ವಲ್ಪ ತಡವಾಗಿದೆ. ನನ್ನದೇ ಒಂದು ಪ್ರೊಡಕ್ಷನ್ ಹೌಸ್ ಆರಂಭಿಸುತ್ತಿದ್ದೇನೆ. ಹೈದರಾಬಾದ್ ನಲ್ಲಿ ಪ್ರೊಡಕ್ಷನ್ ಹೌಸ್ ಕಾರ್ಯಾಚರಿಸಲಿದೆ. ತುಳುವಿನಲ್ಲಿ ಒಳ್ಳೆಯ ಸ್ಟ್ರಿಪ್ಟ್ ಸಿಕ್ಕಿದಲ್ಲಿ ತುಳು ಭಾಷಾ ಸಿನಿಮಾದಲ್ಲೂ ನಟಿಸುವೆ ಎಂದು ಅವರು ಹೇಳಿದರು.