ಕರ್ನಾಟಕ

karnataka

ETV Bharat / state

ಕಷ್ಟಕ್ಕೆ ಸ್ಪಂದಿಸುವ ಗುಣ ಅಪ್ಪ-ಅಮ್ಮನಿಂದ ಬಂದಿದ್ದು.. ಪ್ರಜ್ಞಾ ಸ್ಕಿಲ್ ಟ್ರೈನಿಂಗ್ ಸೆಂಟರ್​ನಲ್ಲಿ​ ಸೋನು ಸೂದ್ ಮಾತು - Bollywood actor Sonu Sood interacts with students

ಪ್ರಜ್ಞಾ ಸ್ಕಿಲ್ ಟ್ರೈನಿಂಗ್ ಸೆಂಟರ್​ಗೆ ನಟ ಸೋನು ಸೂದ್​ ಭೇಟಿ- ವಿದ್ಯಾರ್ಥಿನಿಯರೊಂದಿಗೆ ಸಂವಾದ-ನೆರವಿನ ಗುಣಕ್ಕೆ ತಂದೆ-ತಾಯಿ, ಅಶಕ್ತ ವಿದ್ಯಾರ್ಥಿಗಳೇ ಸ್ಫೂರ್ತಿ ಎಂದ ಸೆಲೆಬ್ರಿಟಿ

actor-sonu-sood-at-mudipu-pragya-skill-training-centre
ಮುಡಿಪು ಪ್ರಜ್ಞಾ ಸ್ಕಿಲ್ ಟ್ರೈನಿಂಗ್ ಸೆಂಟರಿನ ವಿದ್ಯಾರ್ಥಿಗಳ ಜತೆಗೆ ಸಂವಾದ ನಡೆಸಿದ ನಟ ಸೋನು ಸೂದ್

By

Published : Jul 7, 2022, 5:11 PM IST

Updated : Jul 7, 2022, 6:54 PM IST

ಉಳ್ಳಾಲ : ಬಾಲಿವುಡ್ ನಟ, ನಿರ್ಮಾಪಕ ಹಾಗೂ ಸೆಲೆಬ್ರಿಟಿ ಸೋನು ಸೂದ್ ಇಂದು ಮುಡಿಪುವಿನಲ್ಲಿರುವ ಪ್ರಜ್ಞಾ ಸ್ಕಿಲ್ ಟ್ರೈನಿಂಗ್ ಸೆಂಟರ್​ಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಜತೆಗೆ ಸಂವಾದ ನಡೆಸಿದರು. ಈ ವೇಳೆ ತಮ್ಮ ಅನುಭವವನ್ನು ಹಂಚಿಕೊಂಡ ಸೋನು ಸೂದ್, ತಾಯಿ ತವರೂರು ಪಂಜಾಬ್​ಗೆ ಹೋಗುವಾಗ ತಂದೆ ಜತೆಗೂಡಿ ನೊಂದವರಿಗೆ ಆಹಾರವನ್ನು ಒದಗಿಸುತ್ತಿದ್ದೆವು. ಈ ವೇಳೆ ಅವರ ಮುಖದಲ್ಲಿನ ಮಂದಹಾಸ ಬಹಳಷ್ಟು ಸಂತಸವನ್ನು ಕೊಡುತ್ತಿತ್ತು. ಅಶಕ್ತ ವಿದ್ಯಾರ್ಥಿಗಳಿಗೂ ನನ್ನ ಹೆತ್ತವರು ಸಹಾಯ ಮಾಡಿದ್ದರು. ತಾಯಿ ನಡೆಸಿದ ಸೇವೆಯ ಫಲವಾಗಿ ಅಂದು ನೆರವನ್ನು ಪಡೆದ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದು, ನಮ್ಮನ್ನು ಗುರುತಿಸುತ್ತಾರೆ. ತಾಯಿ ಜೊತೆಗೆ ಅಶಕ್ತ ವಿದ್ಯಾರ್ಥಿಗಳೇ ನನಗೆ ಸ್ಫೂರ್ತಿಯಾಗಿದ್ದು, ಅವರ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ ಎಂದರು.

ಮುಡಿಪು ಪ್ರಜ್ಞಾ ಸ್ಕಿಲ್ ಟ್ರೈನಿಂಗ್ ಸೆಂಟರಿನ ವಿದ್ಯಾರ್ಥಿಗಳ ಜತೆಗೆ ಸಂವಾದ ನಡೆಸಿದ ನಟ ಸೋನು ಸೂದ್

ಕೈ ಮುಷ್ಠಿ ತೆರೆದರೆ ಇನ್ನೊಬ್ಬರಿಗೆ ಸಹಕಾರವಾಗುವಂತೆ ಇರಬೇಕೆ ಹೊರತು, ಯಾರಿಗೂ ತೊಂದರೆಯಾಗಬಾರದು ಅನ್ನುವ ತಾಯಿ ಹೇಳಿದ ಮಾತುಗಳು ಇನ್ನೂ ಮನದಲ್ಲಿದೆ. ಹಣೆಬರಹವನ್ನು ನಂಬಿಕೊಂಡು ಬಾಳಬೇಡಿ. ಕಷ್ಟಪಟ್ಟು ಕೆಲಸ ಮಾಡಿ ಸಂಸ್ಥೆಯಿಂದ ಪಡೆದ ತರಬೇತಿಯೊಂದಿಗೆ ಹತ್ತು ಪಟ್ಟು ಕೌಶಲ್ಯವನ್ನು ತಾವಾಗಿಯೇ ಕಲಿತು ಮುಂದುವರಿಸಬೇಕು. ಕೌಶಲ್ಯಾಭಿವೃದ್ಧಿ ತರಬೇತಿಯಿಂದ ಭವಿಷ್ಯದಲ್ಲಿ ಸ್ವಂತ ಕಾಲಿನಲ್ಲಿ ಎಲ್ಲರೂ ನಿಲ್ಲುವಂತಾಗಬಹುದು ಎಂದು ಸಲಹೆ ನೀಡಿದರು.

ಈ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗಳಿಗೆ ಹೆಚ್ಚಿನ ಒತ್ತು ನೀಡಿ ಸಹಕರಿಸಲಿದ್ದೇನೆ. ತನ್ನ ಚಾರಿಟಿಯ ಭಾಗವಾಗಿ ಮಂಗಳೂರಿಗೆ ಹೆಚ್ಚಿನ ಒತ್ತು ನೀಡಿದ್ದು, ಆಕ್ಸಿಜನ್ ಪ್ಲಾಂಟ್ ಅನ್ನು ಈಗಾಗಲೇ ಕೊಡುಗೆಯಾಗಿ ನೀಡಿದ್ದೇನೆ. ರಾಜ್ಯದ ಇತರೆ ಜಿಲ್ಲೆಗಳಲ್ಲೂ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಯನ್ನು ಹೆಚ್ಚಿಸುವ ತರಬೇತುದಾರರಿದ್ದಲ್ಲಿ ಅವರಿಗೂ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು. ಈ ವೇಳೆ ವಿದ್ಯಾರ್ಥಿನಿಯರು ನಟ ಸೋನು ಸೂದ್​ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರಜ್ಞಾ ಒಕೇಷನಲ್ ಸ್ಕಿಲ್ ಡೆವಲಪ್‍ಮೆಂಟ್ ಕೋಆರ್ಡಿನೇಟರ್ ದೀಪ್ತಿ, ಪ್ರಜ್ಞಾ ಕೌನ್ಸಿಲಿಂಗ್ ಸೆಂಟರಿನ ಸ್ಥಾಪಕಿ ಪ್ರೊ. ಹಿಲ್ಡಾ ರಾಯಪ್ಪ, ಟ್ರೆಷರಿಗಳಾದ ಅಮಿತಾ ರಾವ್, ಶಾಲಿನಿ ಅಯ್ಯಪ್ಪ, ಮುಡಿಪು ಪ್ರಜ್ಞಾ ಒಕೇಷನಲ್ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್ ಪ್ರಾಂಶುಪಾಲರಾದ ಶರತ್ ಕುಮಾರ್ ಎನ್.ಕೆ, ಚೆನ್ನೈನ ಅಧಿಕಾರಿ ವಿಜಯ ಕಣ್ಣನ್​, ತರಬೇತುದಾರರಾದ ದಿವ್ಯಾ, ಅಶ್ವಿತಾ, ಸುಕನ್ಯಾ ದಾಸ್, ಲಿಲ್ಲಿ ಹಾಗೂ ಸಿಬ್ಬಂದಿ ಮೇರಿ ಹಾಗೂ ಬಾಬಣ್ಣ ಉಪಸ್ಥಿತರಿದ್ದರು.

ಓದಿ :ನೂಪುರ್ ಶರ್ಮಾ ತಲೆ ಕಡಿಯುತ್ತೇನೆ ಎಂದಿದ್ದ ಆರೋಪಿ ಬಂಧನ

Last Updated : Jul 7, 2022, 6:54 PM IST

ABOUT THE AUTHOR

...view details