ಮಂಗಳೂರು:ಮಂಗಳೂರಿನ ಹೊರವಲಯದ ಅಡ್ಯಾರ್ ಕಣ್ಣೂರಿನಲ್ಲಿ ಎರಡು ದಿನಗಳ ಹಿಂದೆ ನಡೆದ ಎಸ್ಡಿಪಿಐ ಸಮಾವೇಶಕ್ಕೆ ತೆರಳುತ್ತಿದ್ದ ಕಾರ್ಯಕರ್ತನೋರ್ವ ಪೊಲೀಸರಿಗೆ ನಿಂದಿಸಿದ್ದಾನೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ. 27 ರಂದು ನಡೆದ ಎಸ್ಡಿಪಿಐ ಸಮಾವೇಶದಲ್ಲಿ ಭಾಗವಹಿಸಲು ತೆರಳುತ್ತಿದ್ದ ಕಾರ್ಯಕರ್ತರು ಪೊಲೀಸರಿಗೆ ನಿಂದಿಸಿ ಘೋಷಣೆಗಳನ್ನು ಕೂಗುತ್ತಾ, ಪೊಲೀಸರ ಮೇಲೆ ವಾಹನ ಹರಿಸುವ ಯತ್ನವನ್ನು ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ.
ಪೊಲೀಸರನ್ನು ನಿಂದಿಸಿದ ಎಸ್ಡಿಪಿಐ ಕಾರ್ಯಕರ್ತರು ಕೊಡಕ್ಕಲ್ ಕಣ್ಣೂರು ಬ್ಯಾರಿಕೇಡ್ ಚೆಕ್ ಪೋಸ್ಟ್ನಲ್ಲಿ ಪೊಲೀಸ್ ಸಿಬ್ಬಂದಿಗಳಾದ ಪುಟ್ಟರಾಮ, ರವಿಕುಮಾರ್, ಜಗದೀಶ್ ಮೆಟಗುಡ್ಡ ಮತ್ತು ಸಂಗನ ಗೌಡರು ಬಂದೋಬದ್ತ್ ಕರ್ತವ್ಯ ಮಾಡುತ್ತಿದ್ದರು. ಈ ವೇಳೆ ಪಡೀಲ್ ಕಡೆಯಿಂದ ಬಂದ ಕೆ.ಟಿ.ಎಂ ಬೈಕ್ನ ಸವಾರ ಹಾಗೂ ಸಹ ಸವಾರ ಮತ್ತು ಕಾರ್ನಲ್ಲಿದ್ದ ಸವಾರ ಹಾಗೂ ಇತರರು ನಿಂದಿಸಿದ್ದಾರೆ ಎನ್ನಲಾಗ್ತಿದೆ. ಆರೋಪಿಗಳು ಕರ್ತವ್ಯನಿರತ ಪೊಲೀಸರಿಗೆ ನಿಂದಿಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:ಕಾಂಗ್ರೆಸ್ ದಲಿತರಿಗೆ ಸಿಎಂ ಆಗುವ ಅವಕಾಶ ಕೊಡುತ್ತೆ: ಸಿದ್ದರಾಮಯ್ಯ ಭೇಟಿ ಬಳಿಕ ಪರಮೇಶ್ವರ್ ಆಶಾಭಾವ