ಕರ್ನಾಟಕ

karnataka

ETV Bharat / state

ನೈತಿಕ ಪೊಲೀಸ್ ಗಿರಿಗೆ ಪೊಲೀಸರಿಂದಲೇ ಕ್ರಮ.. ಗೃಹ ಸಚಿವ ಆರಗ ಜ್ಞಾನೇಂದ್ರ - karnataka news

ನೈತಿಕ ಪೊಲೀಸ್​ ಗಿರಿ ಪ್ರಕರಣದ ಬಗ್ಗೆ ಪೊಲೀಸರು ಪರಿಶೀಲಿಸಿ ಕ್ರಮಕೈಗೊಳ್ಳುತ್ತಾರೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.

action by police to moral police home minister araga jnanendra
ನೈತಿಕ ಪೊಲೀಸ್ ಗಿರಿಗೆ ಪೊಲೀಸರಿಂದ ಕ್ರಮ: ಗೃಹಸಚಿವ ಅರಗ ಜ್ಞಾನೇಂದ್ರ

By

Published : Dec 10, 2022, 8:28 PM IST

Updated : Dec 10, 2022, 8:39 PM IST

ನೈತಿಕ ಪೊಲೀಸ್ ಗಿರಿಗೆ ಪೊಲೀಸರಿಂದಲೇ ಕ್ರಮ.. ಗೃಹ ಸಚಿವ ಆರಗ ಜ್ಞಾನೇಂದ್ರ

ಮಂಗಳೂರು:ಕಲ್ಲಡ್ಕ ಶ್ರೀರಾಮ ವಿದ್ಯಾಲಯದ ವಾರ್ಷಿಕೋತ್ಸವದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗೃಹ ಸಚಿವ ಆರಂಗ ಜ್ಞಾನೇಂದ್ರ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು, ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಬಾರದು, ಶಾಂತಿ ಸಹಕಾರ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.

ಇತ್ತೀಚಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಎಲ್ಲವೂ ಸರಿಯಾಗಿದ್ದು, ಒಂದೆರಡು ಹತ್ಯೆ ಪ್ರಕರಣಗಳನ್ನು ಬಿಟ್ಟರೆ ಮತ್ತೆಲ್ಲವೂ ಆ ಮಟ್ಟದಲ್ಲಿ ಯಾವುದೂ ನಡೆದಿಲ್ಲ ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ರಾಜ್ಯ ಪೊಲೀಸರಿಗೆ ನೀಡುವ ಪ್ರಶಸ್ತಿಯನ್ನು ಭಾನುವಾರ ಬೆಳಗ್ಗೆ 11 ಗಂಟೆಗೆ ನೀಡಲಾಗುತ್ತದೆ. ನಾನು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲರ ನೇತೃತ್ವದಲ್ಲಿ ಪ್ರಶಸ್ತಿ ಪುರಸ್ಕಾರ ನೀಡಲಿದ್ದೇವೆ ಎಂದು ತಿಳಿಸಿದರು.

ಕಲ್ಲಡ್ಕ ಶ್ರೀರಾಮ ವಿದ್ಯಾಲಯ ರಾಜ್ಯದಲ್ಲಿಯೇ ವಿಶಿಷ್ಟ ಶಾಲೆಯಾಗಿದ್ದು, ಇಂದು ಆ ಶಾಲೆಯ ವಾರ್ಷಿಕೋತ್ಸವದ ವಿಶೇಷವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದೇನೆ ಎಂದರು.

ಇದನ್ನೂ ಓದಿ:ಕಚ್ಚಾಟ ಬಿಟ್ಟು ಕಾಂಗ್ರೆಸ್ ಆಡಳಿತಕ್ಕೆ ತನ್ನಿ: ರಾಜ್ಯ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಕಿವಿಮಾತು

Last Updated : Dec 10, 2022, 8:39 PM IST

ABOUT THE AUTHOR

...view details