ಬಂಟ್ವಾಳ: ಆರೋಪಿಯೋರ್ವನನ್ನು ಕೆಎಸ್ಆರ್ಟಿಸಿ ಬಸ್ನಲ್ಲಿ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಕರೆದುಕೊಂಡು ಹೋಗುವಾಗ ಆತ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಬಳಿಕ ಸಾರ್ವಜನಿಕರ ಸಹಕಾರದಿಂದ ಖದೀಮನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಹ್ಮರಕೋಟ್ಲು ಎಂಬಲ್ಲಿ ನಡೆಯಿತು.
ಕಳ್ಳಿಗೆ ನಿವಾಸಿ ಗಿರೀಶ್ ಯಾನೆ ಗಿರಿಧರ್ ಆರೋಪಿ. 2003ರಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಈತನ ಮೇಲೆ ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ತಲೆಮರೆಸಿಕೊಳ್ಳಲು ಯತ್ನಿಸಿದ ಹೊಸ ಕೇಸ್ ಬಿದ್ದಿದೆ.
ಇದನ್ನೂ ಓದಿ:ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ: ಮೂವರು ಪೊಲೀಸರ ವಶಕ್ಕೆ
ಪ್ರಕರಣದ ಮತ್ತಷ್ಟು ವಿವರ: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗಿರಿಧರ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ನ್ಯಾಯಾಲಯದ ಅದೇಶದಂತೆ ಪೊಲೀಸರು ಪತ್ತೆ ಹಚ್ಚಿ ಕೋರ್ಟ್ಗೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಅದರಂತೆ, ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸಲು ಸರ್ಕಾರಿ ಬಸ್ನಲ್ಲಿ ಇಬ್ಬರು ಪೊಲೀಸರು ಬಿ ಸಿ ರೋಡ್ನಿಂದ ಮಂಗಳೂರಿಗೆ ಸಂಜೆ 6.30 ಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಬ್ರಹ್ಮರಕೋಟ್ಲು ಟೋಲ್ ಗೇಟ್ನಲ್ಲಿ ಬಸ್ ನಿಧಾನವಾಗುತ್ತಿದ್ದಂತೆ ಆರೋಪಿ ಪೊಲೀಸರನ್ನು ಬಸ್‌ನೊಳಗೆ ತಳ್ಳಿ, ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಕೂಡಲೇ ಬೆನ್ನಟ್ಟಿದ ಪೊಲೀಸರು, ಸಾರ್ವಜನಿಕರ ಸಹಾಯದಿಂದ ಸೆರೆ ಹಿಡಿದರು.
ಇದನ್ನೂ ಓದಿ:ವೈದ್ಯೆ ಜೊತೆ ಅನುಚಿತ ವರ್ತನೆ.. ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಂಡ ಚಾಲಕ ಅರೆಸ್ಟ್