ಕರ್ನಾಟಕ

karnataka

ETV Bharat / state

ಅಪ್ರಾಪ್ತ ಮಲಮಗಳನ್ನೇ ಅತ್ಯಾಚಾರ ಮಾಡಿದ ಆರೋಪಿಗೆ 20 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದ ಕೋರ್ಟ್​ - Dakshina Kannada

ತನ್ನ ಪತ್ನಿಯ ಮೊದಲ ಪತಿಯ ಅಪ್ರಾಪ್ತ ಮಲಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ವಿಶೇಷ ಪೋಕ್ಸೋ ನ್ಯಾಯಾಲಯ 20 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.

rape on daughter news
ಮಗಳ ಮೇಲೆ ಅತ್ಯಾಚಾರ

By

Published : Jun 22, 2023, 11:44 AM IST

Updated : Jun 22, 2023, 12:24 PM IST

ಮಂಗಳೂರು (ದಕ್ಷಿಣ ಕನ್ನಡ):ಅಪ್ರಾಪ್ತ ಮಲಮಗಳ ಮೇಲೆ ಅತ್ಯಾಚಾರ ಮಾಡಿರುವ ಬಗ್ಗೆ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ಪೋಕ್ಸೋ ನ್ಯಾಯಾಲಯ, ಆರೋಪಿಗೆ 20 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.

ಅಪರಾಧಿಯು ಅಪ್ರಾಪ್ತ ಬಾಲಕಿಯ ತಾಯಿಯ ಎರಡನೇ ಪತಿಯಾಗಿದ್ದಾನೆ. ಬಾಲಕಿಯ ತಾಯಿ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. 2022ರ ಜುಲೈ 26ರಂದು ನಸುಕಿನ ವೇಳೆ 3.30ರ ವೇಳೆಗೆ ಈತ ತನ್ನ ಪತ್ನಿಯ ಮೊದಲನೇಯ ಪತಿಯ ಪುತ್ರಿಯೊಂದಿಗೆ ಅನುಚಿತವಾಗಿ ವರ್ತಿಸಿ ಅತ್ಯಾಚಾರ ಎಸೆಗಿದ್ದ. ಅಲ್ಲದೇ ಯಾರಲ್ಲಾದರೂ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದ. ಬಳಿಕ ಸಂತ್ರಸ್ತ ಬಾಲಕಿ ಈ ವಿಚಾರವನ್ನು ತನ್ನ ದೊಡ್ಡಮ್ಮನಲ್ಲಿ ತಿಳಿಸಿದ್ದಾರೆ. ಅವರು ತಕ್ಷಣ ಮಂಗಳೂರಿನ ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಮಹಿಳಾ ಠಾಣಾ ಪೊಲೀಸ್ ನಿರೀಕ್ಷಕ ಲೋಕೇಶ್ ಎ.ಸಿ. ಎಫ್ಎಸ್ಎಲ್ ವರದಿಯನ್ವಯ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ವಿಶೇಷ ಪೋಕ್ಸೋ ನ್ಯಾಯಾಲಯ ಆರೋಪಿ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ 20 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.

ಇದನ್ನೂ ಓದಿ:ಇಬ್ಬರು ಹೆಣ್ಣು ಮಕ್ಕಳನ್ನು ಜೀವಂತವಾಗಿ ಸುಟ್ಟು ಹಾಕಿದ ತಾಯಿ!

ಇತ್ತೀಚೆಗೆ ನಡೆದ ಅತ್ಯಾಚಾರ ಘಟನೆಗಳು: - ಸ್ಕೂಟಿ ಕಲಿಸುವುದಾಗಿ ಕರೆದು ಅಪ್ರಾಪ್ತೆ ಮೇಲೆ ಅತ್ಯಾಚಾರ:ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ 52 ವರ್ಷದ ಸಪನ್​ ಮಂಡಲ್​ ಎಂಬ ಆರೋಪಿ 11 ವರ್ಷದ ಬಾಲಕಿಯನ್ನು ಸ್ಕೂಟಿ ಕಲಿಸುವ ನೆಪದಲ್ಲಿ ಕರೆದೊಯ್ದು ಅತ್ಯಾಚಾರವೆಸಗಿದ್ದ. ಜೂನ್​ 19 ರಂದು 4ನೇ ತರಗತಿ ಓದುತ್ತಿದ್ದ ಬಾಲಕಿ ಪ್ರತಿದಿನದಂತೆ ಶಾಲೆಗೆ ಹೋಗಲು ಸಿದ್ಧವಾಗಿ ಮನೆಯ ಮುಂದೆ ಆಟವಾಡುತ್ತಿದ್ದಳು. ಆ ವೇಳೆ ಆರೋಪಿಯು ಚಾಕಲೇಟ್​ ಕೊಡಿಸುವುದಾಗಿ ಹೇಳಿ ತನ್ನ ಸ್ಕೂಟಿಯಲ್ಲಿ ಕರೆದುಕೊಂಡು ಹೋಗಿದ್ದ. ನಂತರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬಾಲಕಿ ಮೇಲೆ ಅತ್ಯಾಚಾರವೆಸಗಿ ಬಾಲಕಿಯನ್ನು ಮನೆಯಿಂದ ತುಸು ದೂರ ಬಿಟ್ಟಿದ್ದ. ಬಾಲಕಿ ಅಳುತ್ತಾ ಬರುತ್ತಿರುವುದನ್ನು ಕಂಡ ಪೋಷಕರು ವಿಚಾರಿಸಿದಾಗ ವಿಚಾರ ತಿಳಿದು ಬಂದಿತ್ತು. ನಂತರ ಪೋಷಕರು ಸಿಂಧನೂರು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದರು. ಪ್ರಕರಣ ತನಿಖೆಗೆ ಕೈಗೊಂಡ ಪೊಲೀಸರು ಆರೋಪಿಯನ್ನು ಸೆರೆಹಿಡಿದು ಪೋಕ್ಸೋ ಕೇಸ್​ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ:ಬಾಲಕಿಗೆ ಲೈಂಗಿಕ‌ ಕಿರುಕುಳ ಪ್ರಕರಣ: ಬಿಇಒಗೆ ದಂಡಸಮೇತ 5 ವರ್ಷ ಜೈಲು ಶಿಕ್ಷೆ

ಇದನ್ನೂ ಓದಿ:ಕೋಚಿಂಗ್ ಕ್ಲಾಸ್‌ಗೆ ತೆರಳುತ್ತಿದ್ದ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ; ರಾಜಸ್ಥಾನದಲ್ಲಿ ಸಂಚಲನ

Last Updated : Jun 22, 2023, 12:24 PM IST

ABOUT THE AUTHOR

...view details