ಬಂಟ್ವಾಳ (ದ.ಕ):ತಾಲೂಕಿನಬಿ.ಸಿ.ರೋಡಿನ ಕೈಕಂಬದಲ್ಲಿ ಕ್ರೈಂ ಬ್ರಾಂಚ್ ಪೋಲೀಸರೆಂದು ನಂಬಿಸಿ ವ್ಯಕ್ತಿಯೊಬ್ಬರ ಬಂಗಾರ ದೋಚಿದ ಹಳೆಯ ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿಗಳಿಗೆ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಇರಾನಿ ಗ್ಯಾಂಗ್ ಸದಸ್ಯರಾದ ಮಹಾರಾಷ್ಟ್ರದ ಜಾಕೀರ್ ಹುಸೇನ್ (26) ಮತ್ತು ಕಂಬರ್ ರಹೀಂ ಮಿರ್ಜಾ (32) ಎಂಬವರು ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನಲ್ಲಿದ್ದಾರೆ.
2020ರ ಜ.18ರಂದು ಮಧ್ಯಾಹ್ನ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಮಿತ್ತಬೈಲು ಕೊಡಂಗೆ ನಿವಾಸಿ ಶಿವಪ್ರಸಾದ್ ಶರ್ಮ ಅವರು ಕೈಕಂಬದಲ್ಲಿ ನಡೆದುಕೊಂಡು ಹೋಗುವ ವೇಳೆ ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಹಿಂದಿ ಭಾಷೆಯಲ್ಲಿ ಮಾತನಾಡಿ ಕರೆದು ನಾನು ಕ್ರೈಂ ಬ್ರಾಂಚ್ ಪೋಲೀಸ್ ಆಫೀಸರ್ ನಿಮ್ಮನ್ನು ಚೆಕ್ ಮಾಡಲು ಇದೆ ಎಂದು ಇವನ ಜೊತೆ ಬಂದ ಇನ್ನೊಬ್ಬ ಕೂಡ ಅದೇ ಮಾತು ಹೇಳಿ ನಂಬಿಸಿ ಅವರು ಐಡೆಂಟಿಟಿ ಕೇಳಿದಾಗ ಆಶೋಕ್ ಕುಮಾರ್ ಕ್ರೈಂ ಬ್ರಾಂಚ್ ಎಂದು ಬರೆದಿರುವ ಕಾರ್ಡು ತೋರಿಸಿದ ಆರೋಪಿಗಳು ಇವರ ಬಳಿಯಲ್ಲಿದ್ದ ಬಂಗಾರ ಮತ್ತು ಹಣವನ್ನು ಕೇಳಿ ಪಡೆದುಕೊಂಡು ಇದನ್ನು ಕರವಸ್ತ್ರದಲ್ಲಿ ಕಟ್ಟಿಕೊಡುತ್ತೇವೆ, ಹೀಗೆ ತಿರುಗಾಡಬಾರದೆಂದು ಹೇಳಿ ಪಡೆದುಕೊಂಡಿದ್ದರು.