ಕರ್ನಾಟಕ

karnataka

ETV Bharat / state

ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪಿ ಬಂಧನ - ಮಂಗಳೂರಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಬಂಧನ

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ವೆಲೆನ್ಸಿಯಾದ ಯುವಕನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್​ ಆಯುಕ್ತರ ಕಚೇರಿ
ಪೊಲೀಸ್​ ಆಯುಕ್ತರ ಕಚೇರಿ

By

Published : Apr 22, 2022, 3:06 PM IST

ಮಂಗಳೂರು: 16 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಪ್ರಕರಣದಲ್ಲಿ 19 ವರ್ಷದ ಯುವಕನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಕಿಗೆ ವೆಲೆನ್ಸಿಯಾದ ಯುವಕ ಲೈಂಗಿಕ ಕಿರುಕುಳ ನೀಡಿದ್ದಾನೆ.

ವಾಮಂಜೂರಿನಲ್ಲಿ ವರ್ಷದ ಹಿಂದೆ ನಡೆದ ಬರ್ತ್‌ಡೇ ಪಾರ್ಟಿಗೆ ಆರೋಪಿ ಮತ್ತು ಗೆಳೆಯರೊಂದಿಗೆ ಸಂತ್ರಸ್ತೆ ಹೋಗಿದ್ದಳು. ಇದರ ವಿಡಿಯೋ ಇತ್ತೀಚೆಗೆ ಬಾಲಕಿಯ ತಾಯಿಗೆ ಸಿಕ್ಕಿದ್ದು, ವಿಚಾರಿಸಿದಾಗ ಲೈಂಗಿಕ ಕಿರುಕುಳ ನೀಡಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ತಾಯಿ ದೂರು ನೀಡಿದ್ದು ಪೊಕ್ಸೊ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಪರಿಚಿತನಿಂದ ವಂಚನೆ: ವಿದೇಶಿ ಪ್ರಜೆಯ ಹಣ ಮರಳಿಸಿದ ಮಂಗಳೂರು ಪೊಲೀಸರು

For All Latest Updates

TAGGED:

ABOUT THE AUTHOR

...view details