ಮಂಗಳೂರು: ಬೋಳೂರು ಮೊಗವೀರ ಮಹಾಸಭಾ ಸಂಘದ ಭಿನ್ನಾಭಿಪ್ರಾಯದಲ್ಲಿ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ತಂದೆ ಮತ್ತು ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಬೋಳೂರು ನಿವಾಸಿಗಳಾದ ದೇವದಾಸ್ ಬೋಳೂರು (61) ಮತ್ತು ಸಾಯಿ ಕಿರಣ್ (21) ಬಂಧಿತರು.
ನವೀನ್ ಸಾಲ್ಯಾನ್ ಗಾಯಗೊಂಡ ವ್ಯಕ್ತಿ. ಬೋಳೂರು ಮೊಗವೀರ ಮಹಾಸಭಾ ಸಂಘದ ಆಡಳಿತ ಭಿನ್ನಾಭಿಪ್ರಾಯ ಹಾಗೂ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಈ ವಿಚಾರದಲ್ಲಿ ಈ ಹಿಂದೆಯೂ ಪ್ರಕರಣ ದಾಖಲಾಗಿತ್ತು.
ಆ.16 ರಂದು ಸಂಜೆ 6.25ರ ಸುಮಾರಿಗೆ ಈ ವಿಚಾರದಲ್ಲಿ ವಾಗ್ವಾದ ಬೆಳೆದು ಬೋಳೂರು ಜಾರಂದಾಯ ದೈವಸ್ಥಾನದ ಹತ್ತಿರ ನವೀನ್ ಸಾಲ್ಯಾನ್ ಅವರ ಮೇಲೆ ದೇವದಾಸ್ ಬೋಳೂರು ಹಾಗೂ ಆತನ ಪುತ್ರ ಸಾಯಿ ಕಿರಣ್ ಕಬ್ಬಿಣದ ರಾಡ್ನಿಂದ ಹಲ್ಲೆಗೈದಿದ್ದಾರೆ. ಪರಿಣಾಮ ತಲೆಗೆ ಗಂಭೀರವಾಗಿ ಗಾಯಗೊಂಡ ಅವರನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ಪ್ರಕರಣದ ಬಗ್ಗೆ ಬರ್ಕೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ವಿಜಯಪುರ: ಚಾಲಕನ ಗಮನ ಬೇರೆಡೆ ಸೆಳೆದು 18 ಲಕ್ಷ ರೂ ಎಗರಿಸಿದ ಖದೀಮರು