ಮಂಗಳೂರು:ಪ್ರಚೋದನಾಕಾರಿ ಭಾಷಣ ಮಾಡಿರುವ ಆರೋಪದಡಿ ಹಿಂದೂ ಮುಖಂಡರಾದ ಶರಣ್ ಪಂಪ್ ವೆಲ್, ಭುಜಂಗ್ ಕುಲಾಲ್ ಮತ್ತು ಶೇಖರಾನಂದ ಸ್ವಾಮಿಗಳ ವಿರುದ್ಧ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಎಸ್ಡಿಪಿಐ ದೂರು ದಾಖಲಿಸಿದೆ.
ಪ್ರಚೋದನಕಾರಿ ಭಾಷಣ ಆರೋಪ: ಹಿಂದೂ ಮುಖಂಡರ ವಿರುದ್ಧ ಪ್ರಕರಣ ದಾಖಲು - ಮಂಗಳೂರಲ್ಲಿ ಪ್ರಚೋದನಕಾರಿ ಭಾಷಣ ಆರೋಪ,
ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಿ ಹಿಂದೂ ಮುಖಂಡರ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ನಗರದ ತೊಕ್ಕೊಟ್ಟಿನಲ್ಲಿ ಡಿ.25ರಂದು ಆಯೋಜಿಸಿರುವ ವಿಶ್ವ ಹಿಂದೂ ಪರಿಷತ್ನ ಪ್ರತಿಭಟನಾ ಸಭೆಯಲ್ಲಿ ಕೋಮು ದ್ವೇಷ ಹಾಗೂ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಹಿಂದೂ ಮುಖಂಡರಾದ ಶರಣ್ ಪಂಪ್ ವೆಲ್, ಭುಜಂಗ ಕುಲಾಲ್ ಮತ್ತು ಶೇಖರಾನಂದ ಸ್ವಾಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೂಡಬಿದಿರೆ ಠಾಣಾಧಿಕಾರಿಗಳಿಗೆ ಭಾಷಣದ ವೀಡಿಯೊ ಸಿ.ಡಿ. ಲಗತ್ತಿಸಲ್ಪಟ್ಟ ದಾಖಲೆಗಳೊಂದಿಗೆ ಎಸ್ಡಿಪಿಐ ಪುತ್ತಿಗೆ ಗ್ರಾಮ ಸಮಿತಿ ಸದಸ್ಯ ಫಿರೋಝ್ ಖಾನ್ ದೂರು ನೀಡಿದ್ದಾರೆ.
ಈ ಸಂದರ್ಭ ಎಸ್ಡಿಪಿಐ ಮುಲ್ಕಿ-ಮೂಡಬಿದಿರೆ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ನಿಸಾರ್ ಮರವೂರು, ಎಸ್ ಡಿಪಿಐ ಮೂಡಬಿದಿರೆ ವಲಯ ಅಧ್ಯಕ್ಷ ಇಬ್ರಾಹೀಂ ಹಂಡೇಲು, ಅಶ್ರಫ್ ಕೋಟೆಭಾಗಿಲು, ಅನ್ಸಾಫ್, ಶೆಹರಾಝ್ ಉಪಸ್ಥಿತರಿದ್ದರು.