ಕರ್ನಾಟಕ

karnataka

ETV Bharat / state

ಮನೆಗೆ ಆಕಸ್ಮಿಕ ಬೆಂಕಿ: ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮ - ಬಂಟ್ವಾಳ ಲೇಟೆಸ್ಟ್​ ನ್ಯೂಸ್

ವಸತಿ ಸಂಕೀರ್ಣದ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನಲ್ಲಿ ನಡೆದಿದೆ.

bantwal
ವಸತಿ ಸಂಕೀರ್ಣದ ಮನೆಗೆ ಆಕಸ್ಮಿಕ ಬೆಂಕಿ

By

Published : May 19, 2021, 8:58 AM IST

ಬಂಟ್ವಾಳ: ತಾಲೂಕಿನ ಪಾಣೆಮಂಗಳೂರಿನ ಆಲಡ್ಕ ಮಸೀದಿ ಸಮೀಪದ ವಸತಿ ಸಂಕೀರ್ಣದ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

ವಸತಿ ಸಂಕೀರ್ಣದ ಮನೆಗೆ ಆಕಸ್ಮಿಕ ಬೆಂಕಿ

ವಸತಿ ಸಂಕೀರ್ಣದಲ್ಲಿದ್ದ ಉದ್ಯಮಿ ಹನೀಫ್ ಹಾಸ್ಕೋ ಎಂಬುವರ ಕುಟುಂಬ ಸಂಬಂಧಿರೊಬ್ಬರ ಅಂತ್ಯಕ್ರಿಯೆಗೆ ತೆರಳಿತ್ತು. ಈ ವೇಳೆ ಅಗ್ನಿ ಅವಘಡ ಸಂಭವಿಸಿದ್ದು, ಮನೆಯಲ್ಲಿದ್ದ 50 ಸಾವಿರ ನಗದು, 20 ಪವನ್ ಚಿನ್ನಾಭರಣ, ಪಿಠೋಪಕರಣಗಳು ಸೇರಿದಂತೆ ಅನೇಕ ವಸ್ತುಗಳು ಸುಟ್ಟು ಭಸ್ಮವಾಗಿವೆ.

ಕೂಡಲೇ ಸ್ಥಳಕ್ಕೆ ತೆರಳಿದ ಬಂಟ್ವಾಳ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​ನಿಂದ ಈ ಬೆಂಕಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.

ಓದಿ:ಕಾರವಾರ: ಸೈಕ್ಲೋನ್ ಅಬ್ಬರದಿಂದ ಕಾಳಿ ನದಿಯಲ್ಲಿ ಸಿಲುಕಿ ಸಾವನ್ನೇ ಗೆದ್ದು ಬಂದ ವೃದ್ಧ!

ABOUT THE AUTHOR

...view details