ಮಂಗಳೂರು: ಹಾಲು ತರಲು ಹೋಗುತ್ತಿದ್ದ ಬಾಲಕನಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸಾಕಷ್ಟು ಅಂತರದಿಂದ ಹಾರಿ ಎದುರಿನಿಂದ ಬರುತ್ತಿದ್ದ ಬೈಕ್ ನಡಿಗೆ ಬಿದ್ದ ದೃಶ್ಯವೊಂದು ಇದೀಗ ವೈರಲ್ ಆಗಿದೆ.
ಜವರಾಯನನ್ನೇ ಹಿಮ್ಮೆಟ್ಟಿಸಿದ ಬಾಲಕ... ಎದೆ ಝಲ್ಲೆನಿಸುವ ಅಪಘಾತದ ವಿಡಿಯೋ ವೈರಲ್ - ಎದೆ ಝಲ್ಲೆನಿಸುವ ಅಪಘಾತದ ದೃಶ್ಯ ವೈರಲ್
ಬಾಲಕನಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸಾಕಷ್ಟು ಅಂತರದಿಂದ ಹಾರಿ ಎದುರಿಗೆ ಬರುತ್ತಿದ್ದ ಬೈಕ್ ಅಡಿಗೆ ಬಿದ್ದ ದೃಶ್ಯವೊಂದು ಇದೀಗ ವೈರಲ್ ಆಗಿದೆ. ಪುತ್ತೂರಿನ ಸಂಪ್ಯ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿತ್ತು.
ಪುತ್ತೂರಿನ ಸಂಪ್ಯ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅಪಘಾತ
ಆ. 28ರಂದು ಸಂಜೆ 4.35 ರ ಸುಮಾರಿಗೆ ಪುತ್ತೂರಿನ ಸಂಪ್ಯ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿತ್ತು. ಆದರೆ ಅದೃಷ್ಟವಶಾತ್ ಆ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಅಪಘಾತದ ದೃಶ್ಯ ಮಾತ್ರ ಬೆಚ್ಚಿಬೀಳಿಸುವಂತಿದೆ.
ಸದ್ಯ ಬಾಲಕನಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿರದ ಕಾರಣ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.