ಬೈಕ್-ಟೆಂಪೋ ನಡುವೆ ಅಪಘಾತ: ಬೈಕ್ ಸವಾರ ಸಾವು - ಮಂಗಳೂರಿನಲ್ಲಿ ಅಪಘಾತ
ಮಂಗಳೂರಿನಲ್ಲಿ ದ್ವಿಚಕ್ರ ವಾಹನಕ್ಕೆ ಟೆಂಪೋ ಡಿಕ್ಕಿಯಾದ ಪರಿಣಾಮ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ.
ಬೈಕ್-ಟೆಂಪೋ ನಡುವೆ ಅಪಘಾತ,ಬೈಕ್ ಸವಾರ ಸಾವು
ಮಂಗಳೂರು: ತಾಲೂಕಿನ ಗುರುಪುರ ಕೈಕಂಬ ಸಮೀಪದ ಪೊಳಲಿ ದ್ವಾರ ಬಳಿ ಬೈಕ್-ಟೆಂಪೋ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾನೆ.
ನಗರದ ಕುಂಪಲ ನಿವಾಸಿ ಸುಕುಮಾರ್ (35) ಮೃತ ಬೈಕ್ ಸವಾರ. ಈತ ಕೈಕಂಬದಿಂದ ಗುರುಪುರ ಮಾರ್ಗವಾಗಿ ಮಂಗಳೂರಿನತ್ತ ತೆರಳುತ್ತಿದ್ದಾಗ ಎದುರಿನಿಂದಬರುತ್ತಿದ್ದ ಟೆಂಪೋ ಪೊಳಲಿ ದ್ವಾರದ ಬಳಿ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ತಲೆ ಮತ್ತು ದೇಹದ ಇತರ ಕೆಲವೆಡೆ ಗಂಭೀರ ಗಾಯಗೊಂಡಿದ್ದ ಸುಕುಮಾರ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.