ಉಳ್ಳಾಲ:ರಾಷ್ಟ್ರೀಯ ಹೆದ್ದಾರಿ-66ರ ಎಕ್ಕೂರು ಬಳಿ ಎರಡು ಲಾರಿಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಲಾರಿ ಚಾಲಕ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾನೆ.
ಲಾರಿಗಳ ನಡುವೆ ಅಪಘಾತ: ಪವಾಡಸದೃಶ ರೀತಿಯಲ್ಲಿ ಚಾಲಕ ಪಾರು - ದಕ್ಷಿಣ ಕನ್ನಡ ಜಿಲ್ಲೆ
ಲಾರಿಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಲಾರಿ ಚಾಲಕ ಪವಾಡಸದೃಶ ರೀತಿಯಲ್ಲಿ ಅಪಾಯದಿಂದ ಪಾರಾಗಿರುವ ಘಟನೆ ಉಳ್ಳಾಲದ ರಾಷ್ಟ್ರೀಯ ಹೆದ್ದಾರಿ-66ರ ಎಕ್ಕೂರು ಬಳಿ ನಡೆದಿದೆ.
ನುಜ್ಜುಗುಜ್ಜಾಗಿರುವ ಲಾರಿ
ಕಾಸರಗೋಡು ಕಡೆಗೆ ಸಾಗುತ್ತಿದ್ದ ಸಿಮೆಂಟ್ ಚೀಲ ತುಂಬಿದ್ದ ಲಾರಿಗೆ, ಬೆಳಗಾವಿಯಿಂದ ಸಕ್ಕರೆ ಸಾಗಿಸುತ್ತಿದ್ದ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಎದುರಿದ್ದ ಸಿಮೆಂಟ್ ಲಾರಿ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಹಿಂಬದಿ ಲಾರಿ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ.
ಪರಿಣಾಮವಾಗಿ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಯಿತು. ಘಟನೆ ಬಳಿಕ ಸಂಚಾರಿ ಠಾಣಾ ಪೊಲೀಸರು ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.