ಕರ್ನಾಟಕ

karnataka

ETV Bharat / state

ಸ್ಕೂಟರ್​​ಗೆ ಡಿಕ್ಕಿ ಹೊಡೆದ ಕಾರು: ತಾಯಿ ಸಾವು, ಮಗಳ ಸ್ಥಿತಿ ಗಂಭೀರ! - ಉಳ್ಳಾಲ ವಾಹನ ಅಪಘಾತ ನ್ಯೂಸ್

ಕುಂಪಲ ಕಡೆಯಿಂದ ಕಲ್ಲಾಪುವಿನತ್ತ ಸ್ಕೂಟರ್​ನಲ್ಲಿ ತೆರಳುತ್ತಿದ್ದ ತಾಯಿ-ಮಗಳಿಗೆ, ಮಂಗಳೂರಿನಿಂದ ತಲಪಾಡಿಯತ್ತ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ತಾಯಿ ಮೃತಪಟ್ಟಿದ್ದು, ಮಗಳ ಸ್ಥಿತಿ ಗಂಭೀರವಾಗಿದೆ.

accident between scooter and car in ullala
ಸ್ಕೂಟರ್​​ಗೆ ಡಿಕ್ಕಿ ಹೊಡೆದ ಕಾರು

By

Published : May 20, 2021, 11:51 AM IST

ಉಳ್ಳಾಲ:ತೊಕ್ಕೊಟ್ಟು ಫ್ಲೈಓವರ್​ನಲ್ಲಿ ಕಾರು ಡಿವೈಡರ್ ಮೇಲೆ ಹಾರಿ ಸ್ಕೂಟರ್​​ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್​ನಲ್ಲಿದ್ದ ತಾಯಿ ಫ್ಲೈ ಓವರಿನಿಂದ ಕೆಳಗೆ ರಸ್ತೆಗೆ ಬಿದ್ದು ಮೃತಪಟ್ಟಿದ್ದಾರೆ. ಮಗಳಿಗೆ ಗಂಭೀರ ಗಾಯಗಳಾಗಿದ್ದು, ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಂಪಲ ನಿವಾಸಿ ವಸಂತಿ (50) ಮೃತರು. ಪುತ್ರಿ ಶ್ರೀಜಾ (20) ಎಂಬುವವರು ಗಂಭೀರ ಸ್ಥಿತಿಯಲ್ಲಿದ್ದು, ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ: ಕುಂಪಲ ಕಡೆಯಿಂದ ಕಲ್ಲಾಪುವಿನತ್ತ ಸ್ಕೂಟರ್​ನಲ್ಲಿ ತೆರಳುತ್ತಿದ್ದ ತಾಯಿ-ಮಗಳಿಗೆ, ಮಂಗಳೂರಿನಿಂದ ತಲಪಾಡಿಯತ್ತ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಫ್ಲೈ ಓವರ್​ನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹಾರಿ ಸ್ಕೂಟರ್​​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹಿಂಬದಿಯಲ್ಲಿದ್ದ ವಸಂತಿ ಫ್ಲೈ ಓವರ್​​ನಿಂದ ಕೆಳಗಿನ ರಸ್ತೆಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾಗುರಿ ಸಂಚಾರಿ ಠಾಣಾ ಪೊಲೀಸರು ಕಾರು ಚಾಲಕ ಶಮಿತ್​​ನನ್ನು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಕಣ್ಣೀರಲ್ಲೇ ಕೈ ತೊಳೆಯುತ್ತಿದೆ ಕನಕಾಂಬರ ಹೂ ಬೆಳೆದಿದ್ದ ರೈತರ ಕುಟುಂಬ

ABOUT THE AUTHOR

...view details