ಕರ್ನಾಟಕ

karnataka

ETV Bharat / state

ಕಲ್ಮಂಜ ಗ್ರಾಮ ಪಂಚಾಯತ್​ನಲ್ಲಿ ಅವ್ಯವಹಾರ ಆರೋಪ.. ಎಸಿಬಿ ಅಧಿಕಾರಿಗಳಿಂದ ದಿಢೀರ್​ ಭೇಟಿ - ಬೆಳ್ತಂಗಡಿ ಸುದ್ದಿ

ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮ ಪಂಚಾಯತ್ ತಾತ್ಕಾಲಿಕ ಡಾಟಾ ಆಪರೇಟರ್ ರಮೇಶ್ ಎಂಬಾತನಿಂದ ಅವ್ಯವಹಾರವಾಗಿದೆ ಎಂಬ ದೂರಿನ ಹಿನ್ನೆಲೆ ಮಂಗಳೂರಿನಿಂದ ಎಸಿಬಿ ಅಧಿಕಾರಿಗಳು ಗ್ರಾಮ ಪಂಚಾಯತ್​ಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ..

ACB officials visit Kalmanja Gram Panchayat
ಕಲ್ಮಂಜ ಗ್ರಾಮ ಪಂಚಾಯತ್​ನಲ್ಲಿ ಅವ್ಯವಹಾರ ಆರೋಪ..ಎಸಿಬಿ ಅಧಿಕಾರಿಗಳು ದಿಢೀರ್​ ಭೇಟಿ

By

Published : Jun 22, 2020, 10:21 PM IST

ಬೆಳ್ತಂಗಡಿ (ದಕ್ಷಿಣಕನ್ನಡ) :ತಾಲೂಕಿನ ಕಲ್ಮಂಜ ಗ್ರಾಮ ಪಂಚಾಯತ್ ಕಚೇರಿಗೆ ಎಸಿಬಿ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು.

ಕಲ್ಮಂಜ ಗ್ರಾಮ ಪಂಚಾಯತ್ ತಾತ್ಕಾಲಿಕ ಡಾಟಾ ಆಪರೇಟರ್ ರಮೇಶ್ ಕುಟುಂಬಕ್ಕೆ ಕಳೆದ ನಾಲ್ಕೈದು ವರ್ಷಗಳಲ್ಲಿ ಗ್ರಾಮ ಪಂಚಾಯತ್ ವಸತಿ ಯೋಜನೆಯ ಎರಡು ಮನೆಗಳು ಮಂಜೂರಾಗಿವೆ. ಅವರು ವಾಸ್ತವ್ಯವಿರುವ ಮನೆ ಅವರ ಅತ್ತಿಗೆಯ ಹೆಸರಿನಲ್ಲಿದೆ. ಮನೆಗೆ ಹಲವು ಡೋರ್ ನಂಬರ್​ಗಳಿವೆ ಎಂದು ಸಚಿನ್‍ಕುಮಾರ್ ಎಂಬುವರು ದೂರು ನೀಡಿದ್ದರು.

ಹೀಗಾಗಿ ಮಂಗಳೂರಿನಿಂದ ಎಸಿಬಿ ಅಧಿಕಾರಿಗಳು ಗ್ರಾಮ ಪಂಚಾಯತ್​ಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.

ABOUT THE AUTHOR

...view details