ಕರ್ನಾಟಕ

karnataka

ETV Bharat / state

ದೈವಾರಾಧನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆ: ಆರೋಪಿಯ ಬಂಧನ

ಈತ ಫೇಸ್​ಬುಕ್​ನ  'ಟ್ರೋಲ್ ಹು  ಟ್ರೋಲ್ ಕನ್ನಡಿಗ' ಎಂಬ ಪೇಜ್​ನಲ್ಲಿ ತುಳುನಾಡಿನ ದೈವಾರಾಧನೆಯ ಬಗ್ಗೆ ನಿಂದಿಸಿ ಟ್ರೋಲ್ ಮಾಡಿದ್ದ.

ದೈವಾರಾಧನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆ

By

Published : Oct 29, 2019, 2:22 AM IST

ಮಂಗಳೂರು: ತುಳುನಾಡಿನ ದೈವಾರಾಧನೆಯನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿದ್ದ ಆರೋಪಿಯನ್ನು ಮಂಗಳೂರಿನ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮುದ್ದುರಾಜ ಕನ್ನಡಿಗ ಅಲಿಯಾಸ್ ಮುದ್ದುರಾಜ ದೇಸಾಯಿಗೌಡ(37) ಬಂಧಿತ ಆರೋಪಿ. ಈತ ಫೇಸ್​ಬುಕ್​ನ 'ಟ್ರೋಲ್ ಹು ಟ್ರೋಲ್ ಕನ್ನಡಿಗ' ಎಂಬ ಪೇಜ್​ನಲ್ಲಿ ತುಳುನಾಡಿನ ದೈವಾರಾಧನೆಯ ಬಗ್ಗೆ ನಿಂದಿಸಿ ಟ್ರೋಲ್ ಮಾಡಿದ್ದ.

ಈ ಬಗ್ಗೆ ಅರ್ನಾಲ್ಡ್ ತುಳುವ ಎಂಬುವರು ಸೈಬರ್ ಕ್ರೈಂಗೆ ದೂರು ನೀಡಿದ್ದರು. ಸೈಬರ್ ಕ್ರೈಂ ಪೊಲೀಸರು ಪೊಲೀಸ್ ಆಯುಕ್ತರು, ಡಾ.ಪಿ.ಎಸ್.ಹರ್ಷ ಅವರ ನಿರ್ದೇಶನದಂತೆ ಸಿದ್ದಾಪುರದ ಗುಪ್ತಾ ಎಂಬಲ್ಲಿ ಆರೋಪಿ ಮುದ್ದರಾಜ ದೇಸಾಯಿಗೌಡನನ್ನು ಬಂಧಿಸಿದ್ದಾರೆ.

ABOUT THE AUTHOR

...view details