ಕರ್ನಾಟಕ

karnataka

ETV Bharat / state

ಡಿಕೆಶಿ ಮೇಲೆ 'ಅಭಯ' ಇರಲೆಂದು ಬಪ್ಪನಾಡಿನ ದುರ್ಗೆಗೆ ವರ್ಷಪೂರ್ತಿ ಮಲ್ಲಿಗೆ ಸಮರ್ಪಣೆ! - ಡಿ.ಕೆ. ಶಿವಕುಮಾರ್

ದುರ್ಗಾ ದೇವಿಯ ದಯೆ ಸದಾ ಡಿ.ಕೆ. ಶಿವಕುಮಾರ್ ಮೇಲಿರಲಿ ಎಂದು ಮಾಜಿ ಶಾಸಕ ಅಭಯಚಂದ್ರ ಜೈನ್ ಅವರು ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಿಗೆ ವರ್ಷಪೂರ್ತಿ ಮಲ್ಲಿಗೆ ಹೂ ಸಮರ್ಪಣೆ ಮಾಡುವುದಾಗಿ ಹೇಳಿದ್ದಾರೆ.

Abhayachandra jain
Abhayachandra jain

By

Published : Aug 10, 2020, 3:30 PM IST

ಮಂಗಳೂರು:ನಿತ್ಯವೂ ಮಲ್ಲಿಗೆ ಹೂವಿನಿಂದ ಅಲಂಕೃತಳಾಗಿ ಭಕ್ತರಿಗೆ ದರ್ಶನ ನೀಡುತ್ತಿದ್ದ ಕೋಮುಬಾಂಧವ್ಯದ ಪ್ರತೀಕಳಾದ ಬಪ್ಪನಾಡಿನ ದುರ್ಗೆಗೂ ಲಾಕ್ ಡೌನ್ ನಿಂದ ಮಲ್ಲಿಗೆ ಹೂವಿನ ಅಭಾವವಾಗಿದೆಯಂತೆ.‌

ದೇವಿಯ ಪೂಜೆಗೂ ಹೂ ಅಭಾವ ಆಗಿದ್ದರಿಂದ ಅರ್ಚಕರೊಬ್ಬರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ‌. ಈ ಬಗ್ಗೆ ವಿಷಯ ತಿಳಿದ ಮಾಜಿ ಶಾಸಕ ಅಭಯಚಂದ್ರ ಜೈನ್ ಅವರು, ಮುಂದೆ ನಿತ್ಯ ಪೂಜೆಗೆ ಯಾವುದೇ ರೀತಿಯಲ್ಲಿ ಮಲ್ಲಿಗೆಯ ಕೊರತೆಯಾಗದಂತೆ ವರ್ಷ ಪೂರ್ತಿ ಮಲ್ಲಿಗೆ ಹೂವು ನೀಡುವುದಾಗಿ ಹೇಳಿದ್ದಾರೆ‌.

ಅಭಯಚಂದ್ರ ಜೈನ್ ಅವರು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿ, ದೇವಾಲಯದ ಆಡಳಿತಾಧಿಕಾರಿಯಾದ ಮುಲ್ಕಿಯ ಅರಸ ದುಗ್ಗಣ್ಣ ಸಾವಂತರು ಹಾಗೂ ಅರ್ಚಕರಲ್ಲಿ ಮಾತನಾಡಿ, ದೇವಿಯ ಪೂಜೆಗೆ ಕೊರತೆಯಾಗದಂತೆ ವರ್ಷ ಪೂರ್ತಿ ಮಲ್ಲಿಗೆ ಹೂವನ್ನು ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.

ಅಲ್ಲದೆ ಈ ಮಲ್ಲಿಗೆ ಸೇವೆಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರ ಹೆಸರಲ್ಲಿ ಸಮರ್ಪಿಸುತ್ತಿದ್ದು, ದೇವಿಯ ಅಭಯ ಸದಾ ಅವರ ಮೇಲಿರಲಿ ಎಂದು ಪ್ರಾರ್ಥಿಸಿದ್ದಾರೆ.

ABOUT THE AUTHOR

...view details