ಮಂಗಳೂರು:ಯಾವುದೋ ವಾಹಿನಿಗಳು ವರದಿ ಮಾಡಿವೆ ಎಂದು ಎಸ್‌ಡಿಪಿಐ ಕಾರ್ಯಕರ್ತರನ್ನು ಬಂಧಿಸಿರುವ ದ.ಕ.ಜಿಲ್ಲೆಯ ಎಸ್ಪಿ ಬಿಜೆಪಿಯ ಗುಲಾಮರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮೈಸೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್ಡಿಪಿಐನ ಅಬ್ದುಲ್ ಮಜೀದ್ ಆಕ್ರೋಶ ಗ್ರಾ.ಪಂ ಚುನಾವಣೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಸ್ಪಿಗೆ ಖಾಕಿಯ ಧರ್ಮದಂತೆ ಕೆಲಸ ಮಾಡಲು ಸಾಧ್ಯವಾಗದಿದ್ದಲ್ಲಿ ಕಾವಿ ತೊಟ್ಟು ತೊಲಗಲಿ. ಯಾರೋ ಬಿಜೆಪಿಯ ನಾಯಕರು ಹೇಳಿದಂತೆ ಕೇಳುವುದಾದಲ್ಲಿ ದ.ಕ.ಜಿಲ್ಲಾ ಎಸ್ಪಿ ಅಣ್ಣಾಮಲೈರಂತೆ ಬಿಜೆಪಿ ಸೇರಿಕೊಳ್ಳಲಿ ಎಂದರು.
ಓದಿ:ಬಂಧಿತರ ಬಿಡುಗಡೆಯಾಗದಿದ್ದರೆ ಎಸ್ಪಿ ಕಚೇರಿಗೆ ಮುತ್ತಿಗೆ : ಎಸ್‌ಡಿಪಿಐ ಮುಖಂಡರಿಂದ ಎಚ್ಚರಿಕೆ
ಎಸ್ಡಿಪಿಐಯನ್ನು ಪ್ರಕರಣ ದಾಖಲಿಸಿ ಹೆದರಿಸಲು ಸಾಧ್ಯವಿಲ್ಲ. ನೀವು ಎಷ್ಟು ನಮ್ಮನ್ನು ಅದುಮಿಡಲು ಪ್ರಯತ್ನಿಸುವಿರೋ, ಅಷ್ಟು ನಾವು ಸ್ಪ್ರಿಂಗ್ನಂತೆ ಪುಟಿದೆದ್ದು ಫಿನಿಕ್ಸ್ನಂತೆ ನಾವು ಮತ್ತೆ ಎದ್ದು ಬರುತ್ತೇವೆ. ಎಸ್‌ಡಿಪಿಐ ಪಕ್ಷದ ಬಗ್ಗೆ ಎಷ್ಟು ಅಪಪ್ರಚಾರ ನಡೆಸಲಾಗುತ್ತದೆಯೋ ಅಷ್ಟು ನಮಗೆ ಜನರು ಬೆಂಬಲ ನೀಡುತ್ತಾರೆ. ಮುಂದೆ ಬರುವ ತಾ.ಪಂ, ಜಿ.ಪಂ, ವಿಧಾನಸಭಾ ಚುನಾವಣೆಯನ್ನು ಗ್ರಾ.ಪಂ ಚುನಾವಣೆಯನ್ನು ಗೆದ್ದು ಬಂದಂತೆ ಗೆದ್ದು ಬರುತ್ತೇವೆ ಭವಿಷ್ಯ ನುಡಿದರು.