ಮಂಗಳೂರು: ಉಳ್ಳಾಲವನ್ನು ಆಳಿದ ವೀರರಾಣಿ ಅಬ್ಬಕ್ಕನ ಪೌರುಷ ಹಾಗೂ ಆದರ್ಶ ಪಾಲಿಸಿದ ಮಹಿಳಾ ಸಾಧಕರಿಗೆ ಈ ವರ್ಷದ ವೀರನಾರಿ ಅಬ್ಬಕ್ಕ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಪೌರುಷ, ಆದರ್ಶ ಪಾಲಿಸಿದ ಮಹಿಳಾ ಸಾಧಕರಿಗೆ ವೀರನಾರಿ ಅಬ್ಬಕ್ಕ ಪ್ರಶಸ್ತಿ: ಕೋಟಾ ಶ್ರೀನಿವಾಸ ಪೂಜಾರಿ - ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ
ಉಳ್ಳಾಲವನ್ನು ಆಳಿದ ವೀರರಾಣಿ ಅಬ್ಬಕ್ಕನ ಪೌರುಷ ಹಾಗೂ ಆದರ್ಶ ಪಾಲಿಸಿದ ಮಹಿಳಾ ಸಾಧಕರಿಗೆ ಈ ವರ್ಷದ ವೀರನಾರಿ ಅಬ್ಬಕ್ಕ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಅಬ್ಬಕ್ಕ ಉತ್ಸವದ ಸಿದ್ಧತೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಮುಂದಿನ ವರ್ಷದಿಂದ ಓರ್ವರಿಗೆ ಮಾತ್ರ ಅಬ್ಬಕ್ಕ ಪ್ರಶಸ್ತಿ ನೀಡಲು ಚಿಂತಿಸಲಾಗಿದೆ. ಸಾಧಕರ ಆಯ್ಕೆಗೆ ಮಾನದಂಡಗಳನ್ನು ಇರಿಸಲಾಗುವುದು. ಅಬ್ಬಕ್ಕ ಉತ್ಸವದ ಉದ್ಘಾಟನೆಗೆ ಖ್ಯಾತ ಮಹಿಳಾ ಸಾಧಕರನ್ನು ಆಹ್ವಾನಿಸುವ ಮೂಲಕ ಅಬ್ಬಕ್ಕಳ ಸಾಧನೆ ಪಸರಿಸುವ ಚಿಂತನೆ ಸರ್ಕಾರಕ್ಕಿದೆ ಎಂದರು.
ಈ ವರ್ಷದ ಅಬ್ಬಕ್ಕ ಉತ್ಸವ ಫೆಬ್ರವರಿ 29 ಮತ್ತು ಮಾರ್ಚ್ 1ರಂದು ಅಸೈಗೋಳಿಯಲ್ಲಿ ನಡೆಯಲಿದೆ. ಇದರ ಅಂಗವಾಗಿ ನಡೆಯುವ ಕ್ರೀಡೋತ್ಸವ ಫೆ. 23ರಂದು ನಡೆಯಲಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅಬ್ಬಕ್ಕ ಚರಿತ್ರೆಯ ಹಿನ್ನೆಲೆಯಲ್ಲಿ ವಿವಿಧ ಸ್ಪರ್ಧೆಗಳನ್ನು ಫೆ. 25ರಂದು ಏರ್ಪಡಿಸಲಾಗಿದೆ ಎಂದು ತಿಳಿಸಿದರು.