ಬೆಳ್ತಂಗಡಿ(ದಕ್ಷಿಣ ಕನ್ನಡ):ಮದುವೆಯಾಗಲು ಪ್ರೀತಿಸಿದ ಯುವತಿ ಮನೆ ಬಿಟ್ಟು ಬರಲಿಲ್ಲ ಎಂಬ ಕಾರಣಕ್ಕೆ ಪ್ರಿಯಕರ ತನ್ನ ಲವರ್ಗೆ ಚೂರಿಯಿಂದ ಇರಿದ ಘಟನೆ ಲಾಯ್ಲ ಗ್ರಾಮದ ಪುತ್ರಬೈಲು ಎಂಬಲ್ಲಿ ನಡೆದಿದೆ.
ಪುಂಜಾಲಕಟ್ಟೆ ಸಮೀಪದ ಶಮೀರ್ ಎಂಬ ಯುವಕ ಪುತ್ರಬೈಲು ನಿವಾಸಿಯಾದ ಯುವತಿಯನ್ನು ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದ. ಏಪ್ರಿಲ್ 06 ರಂದು ರಾತ್ರಿ ತನ್ನ ಲವರ್ ಮನೆಗೆ ತೆರಳಿದ್ದ ಶಮೀರ್ ಮದುವೆಯಾಗಲು ಮನೆ ಬಿಟ್ಟು ಬರಬೇಕು ಎಂದು ಆಕೆಗೆ ಒತ್ತಾಯಿಸಿದ್ದಾನೆ. ಆದ್ರೆ ಯುವತಿ ಮನೆ ಬಿಟ್ಟು ಬರಲು ನಿರಾಕರಿಸಿದ್ದಾಳೆ.